ಸಗರನಾಡು ಬಸ್‌ಗಳ ಸಂಖ್ಯೆ ಹೆಚ್ಚಿಸದಿದ್ದರೆ ಉಗ್ರ ಹೋರಾಟ: ಮಲ್ಲಿಕಾರ್ಜುನ ಸತ್ಯಂಪೇಟೆ

0
109

ಸುರಪುರ: ಹಿಂದಿನಿಂದಲೂ ಸುರಪುರ ಭಾಗದಿಂದ ಕಲಬುರ್ಗಿಗೆ ಹೋಗಿಬರುವವರ ಸಂಖ್ಯೆ ಹೆಚ್ಚಿದೆ,ಆದರೆ ಹೋಗುವವರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ.ಬಡವರಿಗೆ ವರದಾನದಂತಾಗಿದ್ದ ಸಗರನಾಡು ಬಸ್‌ಗಳ ಸಂಖ್ಯೆ ತೀರಾ ಕಡಿಮೆಗೊಳಿಸಿದ್ದರಿಂದ ಜನರು ದುಬಾರಿ ದರ ನೀಡಿ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಹಿಂದಿನಂತೆ ಸಗರನಾಡು ಬಸ್‌ಗಳ ಓಡಾಟದ ಸಂಖ್ಯೆ ಹೆಚ್ಚಿಸಬೇಕು,ಇಲ್ಲವಾದರೆ ಬಸ್ ಘಟಕದ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.

ಸುರಪುರ ಘಟಕ ವ್ಯವಸ್ಥಾಪಕ ಅಶೋಕ ಅವರಿಗೆ ಸಂಘದಿಂದ ಮನವಿ ಸಲ್ಲಿಸಿ ಮಾತನಾಡಿ,ನಿತ್ಯವು ನೂರಾರು ಸಂಖ್ಯೆಯ ಬಡ ಜನರು ಆಸ್ಪತ್ರೆಗಳಿಗೆ ಕಲಬುರ್ಗಿಗೆ ಹೋಗುತ್ತಾರೆ.ಅಂತ ಜನರಿಗೆ ಈಗಿನ ಬಸ್ ದರ ಕೊಟ್ಟು ಹೋಗುವುದು ತುಂಬಾ ಕಷ್ಟದಾಯಕವಾಗಿದೆ.ಈ ಮುಂಚೆ ಹದಿನೈದು ನಿಮಿಷಕ್ಕೆ ಒಂದು ಸಗರನಾಡು ಬಸ್ ಓಡಿಸಲಾಗುತ್ತಿತ್ತು.ಆದರೆ ಇಂದು ಸುಮಾರು ಎರಡು ಗಂಟೆಗೆ ಒಂದು ಬಸ್ ಓಡಿಸುವ ಮೂಲಕ ಜನರು ಕಾಯ್ದು ಕಾಯ್ದು ಸುಸ್ತಾಗುವಂತೆ ಮಾಡಲಾಗುತ್ತಿದೆ.ಇದರಿಂದ ಬೇಸತ್ತ ಸಾರ್ವಜನಿಕರು ನಿತ್ಯವು ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ.ಆದ್ದರಿಂದ ಈ ಮುಂಚೆಯಂತೆ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಸಗರನಾಡು ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಮುಖಂಡ ಹಣಮಂತ್ರಾಯ ಕೊಂಗಂಡಿ ಮಾತನಾಡಿ, ಸಗರನಾಡು ಬಸ್‌ಗಳ ಓಡಾಟದ ಸಂಖ್ಯೆ ಹೆಚ್ಚಿಸುವ ಜೊತೆಗೆ ವೇಗದೂತ ಬಸ್‌ಗಳು ಬಸ್ ನಿಲ್ದಾಣದಲ್ಲಿಯ ಸಗರನಾಡು ಬಸ್‌ಗಳು ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ಅನಕ್ಷರಸ್ಥ ಜನರಿಗೆ ಕಲಬುರ್ಗಿ ಎಂದು ಹೇಳಿ ಹತ್ತಿಸಿಕೊಂಡು ನಂತರ ದುಬಾರಿ ದರ ಪಡೆದು ಜನರಿಗೆ ತೊಂದರೆ ಮಾಡಲಾಗುತ್ತಿದೆ. ಆದ್ದರಿಂದ ಸಗರನಾಡು ಬಸ್‌ಗಳ ಹೊರತುಪಡಿಸಿ ಬೇರೆ ಯಾವುದೆ ಬಸ್‌ಗಳನ್ನು ಆ ಸ್ಥಳದಲ್ಲಿ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಗರನಾಡು ಬಸ್‌ಗಳು ಎಲ್ಲಾ ಗ್ರಾಮಗಳಿಗು ನಿಲ್ಲಿಸುಂತೆ ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲ್ಲೂಕ ಅಧ್ಯಕ್ಷ ಬಸವರಾಜಪ್ಪಗೌಡ ಹೆಮ್ಮಡಗಿ, ಸಿದ್ದು ಮಂಡಗಳ್ಳಿ, ಗೌಡಪ್ಪಗೌಡ ಮಂಡಗಳ್ಳಿ, ಶಿವಾನಂದ ಕೆಂಭಾವಿ, ನಾಗರಾಜ ಮಂಡಗಳ್ಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here