ಕಲಬುರಗಿ: ದೇಶಿ ಊಟದ ಪದ್ದತಿಯಿಂದ ರೋಗಗಳು ದೂರ. ದೇಶಿ ಊಟಮಾಡುವದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಯಾವ ಅನಾರೋಗ್ಯ ವು ನಮ್ಮತ್ತ ಸುಳಿಯುವುದಿಲ್ಲ ಎಂದು ಪಿ.ಯು.ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ್ ಕರೆ ನೀಡಿದರು.
ಅವರು ನಗರದ ಶ್ರೀಮತಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ರಾಮಧಾನ್ಯ ಚರಿತ್ರೆ ಯ ಪಠ್ಯ ಆಧಾರಿತ ದೇಶಿ ಊಟದ ಸಂಭ್ರಮ ೨೦೨೦ ಉದ್ಘಾಟಿಸಿ ಮಾತನಾಡಿದರು ಮುಂದುವರೆದು ಮಾತನಾಡಿದ ಅವರು ಅಂದಿನ ಊಟದ ಪದ್ದತಿ ಹಾಗೂ ಆಹಾರ ಪದ್ದತಿ ನಮ್ಮ ಆರೋಗ್ಯ ವರ್ಧನೆಗೆ ಕಾರಣವಾಗುತ್ತಿತ್ತು.
ಆದರೆ ಇಂದಿನ ಕಲಬೆರಕೆ ಆಹಾರ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳುತ್ತಾ ಸಾಧ್ಯವಾದಷ್ಟು ದೇಶಿ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವದು ಒಳಿತು ಎಂದು ಕರೆ ನೀಡಿದರು ಕಾರ್ಯಕ್ರಮದಲ್ಲಿ ಡಾ.ಶಶಿಶೇಖರ ರೆಡ್ಡಿ ಅತಿಥಿಗಳಾಗಿ ಭಾಗವಹಿಸಿದ್ದರು ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾ ಅಧ್ಯಕ್ಷ ತೆ ವಹಿಸಿದ್ದರು ಡಾ.ಮೀನಾಕ್ಷಿ ಬಾಳಿ ಸ್ವಾಗತಿಸಿ ಪರಿಚಯಿಸಿದರು,ಡಾ.ನಾಗೇಂದ್ರ ಮಸುತೆ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಾಂತಾ ಮಠ,ಡಾ.ವಿಜಯಕುಮಾರ ಪರುತೆ,ಡಾ.ಶಿವರಾಜ ಮುಲುಗೆ,ಡಾ.ಮಹೇಶ ಗಂವ್ಹಾರ.ಡಾ.ನೀಲಕಂಠ ವಾಲಿ, ಡಾ.ಶಿವರಾಜ ಗೌನಳ್ಳಿ.ಡಾ ಫರ್ಜಾನಾ,ಡಾ.ಶಕುಂತಲಾ ಪಾಟೀಲ,ಪ್ರೊ.ಕಲಾವತಿ ಡಿ.ಹಾಗೂ ಬೋಧಕ,ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
Zithromax Dosing Chart Cialis Proscar Para El Pelo Propecia online generic cialis Propecia Online America