ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಬುದ್ದನ ಪ್ರಭಾವ ಪ್ರೇರಣೆ: ಡಾ. ಶ್ರೀಶೈಲ ನಾಗರಾಳ

0
73

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ದಲ್ಲಿ ಇಂದಿನ ಸಮಾನಾಂತರ ಗೋಷ್ಠಿ ಯಲ್ಲಿ ಕನ್ನಡ ಸ್ರಜನಶೀಲ ಸಾಹಿತ್ಯ ದಿಲ್ಲಿ ಬುದ್ದ ಕುರಿತ ವಿಚಾರ ಗೋಷ್ಠಿಯಲ್ಲಿ ವಿಮರ್ಶಕ ಡಾ. ಶ್ರೀಶೈಲ ನಾಗರಾಳ ಅಧ್ಯಕ್ಷತೆ ವಹಿಸಿದ್ದರು.

ಅವರು ವಿಕಾರ ಗೊಂಡ ಮನಸುಗಳಿಗೆ ದಿವ್ಯೌಷಧಿ ಬುದ್ದನ ಜೀವನ ಮತ್ತು ವಿಚಾರ ,ಸಂದೇಶಗಳಾಗಿವೆ ಸಾವಿರಾರು ವರ್ಷಗಳ ಪ್ರಾಚೀನ ಮಧ್ಯಕಾಲೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಬುದ್ದನ ಪ್ರಭಾವ ಪ್ರೇರಣೆ ಆಗಿದೆ 9ನೆಯ ಶತಮಾನದ ಕವಿರಾಜಮಾರ್ಗ ವಡ್ಡಾರಾಧನೆ 10ನೇ ಶ.ಮಾ.ದ ಪಂಪ ರನ್ನ , ದುರ್ಗಸಿಂಹ ಜನ್ನ. ಅನಂತರದ ವಚನ ಸಾಹಿತ್ಯ ತತ್ವಪದಕಾರರಲ್ಲಿ ಆಧುನಿಕ ಕನ್ನಡ ಸಾಹಿತ್ಯ ಕಾವ್ಯ ಕತೆ,ನಾಟಕ ಕಾದಂಬರಿ, ವಿಚಾರ ಗಳಲ್ಲಿ ಕಾಣುತ್ತೇವೆ ಎಂದು ತಮ್ಮ ಅಭಿಪ್ರಾಯಗಳನ್ನು ಮುಕ್ತಪಡಿಸಿದರು.

Contact Your\'s Advertisement; 9902492681

ವಿಜಯಪುರ ಅಕ್ಕಿ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ದ ಕನ್ನಡ ಅಧ್ಯಾಪಕರು ಡಾ ನಾಗರಾಜ ಎಂ ಅವರು ಕನ್ನಡ ಕಥಾ ಸಾಹಿತ್ಯ ದಲ್ಲಿ ಬುದ್ದ ಕುರಿತು ಉಪನ್ಯಾಸ ನೀಡಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here