ಸುರಪುರ: ಅಗ್ನಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ ಕಾರ್ಯಾಲಯಕ್ಕೆ ಬರವುದೆ ಅಪರೋಪವಾಗಿದೆ ಅಧಿಕಾರಿಗಳಿಂದ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೆ ತರನಾದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ .ಅಲ್ಲದೆ ಗ್ರಾಮ ಪಂಚಾಯತಿಗೆ ಬಂದಿರುವ ಅನುದಾನದ ಬಗ್ಗೆ ಯಾವುದೆ ಮಾಹಿತಿ ಕೊಡದೆ ಗ್ರಾಮ ಪಂಚಾಯತಿ ಸದಸ್ಯರ ಬಗ್ಗೆ ಕನಿಷ್ಟ ಗೌರವ ಕೊಡದೆ ದುರ್ವತನೆ ತೋರುತ್ತಿದ್ದಾರೆ ಇಂತಹ ಅಧಿಕಾರಿಯಿಂದ ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಜನರು ರೋಸಿ ಹೋಗಿದ್ದಾರೆ.
ಆದ್ದರಿಂದ ಈ ನಮ್ಮ ಅಗ್ನಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಯನ್ನು ಕರ್ತವ್ಯಲೋಪದ ಮೇಲೆ ಅಮಾನತ್ತು ಮಾಡುವಂತೆ ಅಲ್ಲಿಯ ಗ್ರಾಮ ಪಂಚಾಯತಿ ಸದಸ್ಯರಾದ ಮಡಿವಾಳಮ್ಮ ಮತ್ತು ದೇವಿಂದ್ರಪ್ಪಗೌಡ ಆರೋಪಿಸಿದ್ದಾರೆ.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಆಗ್ರಹಿಸಿರುವ ಅವರು, ೧೪ನೇ ಹಣಕಾಸು ಯೋಜನೆ ಅಡಿಯಲ್ಲಿ ಬಂದ ಅನುದಾನದ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿಯು ನೀಡದೆ,ಯಾವುದೆ ಅಭಿವೃಧ್ಧಿ ಕೆಲಸಗಳನ್ನು ಮಾಡದೆ ಐದು ವರ್ಷದಿಂದ ಬಂದ ಹಣವನ್ನೆಲ್ಲ ದುರುಪಯೋಗ ಮಾಡಿಕೊಂಡಿದ್ದಾರೆ.ಈ ಅಧಿಕಾರಿಯ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆ ಮಾಡಿಸಬೇಕು ಮತ್ತು ನಮ್ಮ ಅಗ್ನಿ ಗ್ರಾಮದ ಪರಿಷ್ಟ ಜಾತಿ ಮೀಸಲು ವಾರ್ಡಿನ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.