ಬೇಡಿಕೆಗೆ ಒತ್ತಾಯಿಸಿ ಜಯ ಕರ್ನಾಟಕ ಪ್ರತಿಭಟನೆ

0
36

ಆಳಂದ: ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ೨ನೇ ಕಂತ್ತಿನ ಸಮವಸ್ತ್ರ ಪೂರೈಕೆ ಸೇರಿ ಇನ್ನಿತರ ಬೇಡಿಕೆ ಮುಂದಿಟ್ಟುಕೊಂಡು ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಂಡು ಒತ್ತಾಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿನಲ್ಲಿ ಸಿಆರ್‌ಪಿಗಳು ನಿಯಮಾನುಸಾರ ಗಾಳಿಗೆ ತೂರಿ ಇಂಥಲ್ಲೇ ಸಮವಸ್ತ್ರ ಖರೀದಿಸಬೇಕು ಎಂದು ಶಾಲಾ ಮುಖ್ಯ ಗುರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಿಆರ್‌ಪಿಗಳು ಸೂಚಿಸಿದ ಸ್ಥಳದಲ್ಲೇ ಶಾಲಾ ಸಮವಸ್ತ್ರ ಖರೀದಿಸಲು ಮುಂದಾದರೆ ಗುಣಮಟ್ಟದಿಂದ ದೊರೆಯುತ್ತಿಲ್ಲ. ಇದನ್ನು ಶಾಲಾ ಎಸ್‌ಡಿಎಂಸಿ ಹಾಗೂ ಮುಖ್ಯಗುರುಗಳು ಸುತಾರ ಒಪ್ಪುತ್ತಿಲ್ಲ. ಸಿಆರ್‌ಪಿಗಳು ಮತ್ತು ಮುಖ್ಯಗುರುಗಳ ಹಗ್ಗಜಗ್ಗಾಟದಿಂದಾಗಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸಮವಸ್ತ್ರ ದೊರೆಯುತ್ತಿಲ್ಲ. ಕೂಡಲೇ ಶಿಕ್ಷಣಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗ್ಗೆ ಹರಿಸುವ ಮೂಲಕ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಸರ್ಕಾರಿ ನೌರರಾಗಿರುವ ಸಿಆರ್‌ಪಿಗಳು ತಮ್ಮ ಕರ್ತವ್ಯ ಮರೆತು ಖಾಸಗಿ ಏಜ್ಂಟರ್ ಪರ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂಥ ತಿಕ್ಕಾಟದಿಂದಾಗಿ ಶೈಕ್ಷಣಿಕ ವರ್ಷ ಕೊನೆಯ ಹಂತಕ್ಕೆ ತಲುಪಿದರು ಮಕ್ಕಳಿಗೆ ಸಮವಸ್ತ್ರ ನೀಡಿಲ್ಲ. ತಕ್ಷಣವೇ ನಿಯಮದಂತೆ ಆಯಾ ಶಾಲೆಗಳ ಮುಖ್ಯಸ್ಥರೆ ಮಕ್ಕಳಿಗೆ ಗುಣಮಟ್ಟದ ಬಟ್ಟೆ ಖರೀದಿಸಿ ಹಂಚಿಕೆ ಮಾಡುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.  ಸಂಘದ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ಸಹ ಕಾರ್ಯದರ್ಶಿ ಶರಣು ಕುಲಕರ್ಣಿ, ಸುನೀಲ ಐರೂಡಗಿ, ಮಲ್ಲು ಕೊರಳ್ಳಿ, ಪ್ರಕಾಶ ಪಾಟೀಲ, ವಿಜಯಕುಮಾರ ಭೂಸನೂರೆ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ರವಿಂದ್ರ ಪಟ್ಟಣಶೆಟ್ಟಿ, ಶ್ರೀಶೈಲ ಬೇಲಿ, ಪ್ರಜ್ವಲ್ ಹೊಸಳ್ಳಿ, ಚನ್ನಯ್ಯ ಸ್ವಾಮಿ, ಸಾಯಬಣ್ಣ ಎಣೆಗೂರೆ, ಶ್ರೀಶೈಲ ಗೊಳೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳಕ್ಕೆ ಹಾಜರಾದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ ನಿರಡಗಿ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದ ಅವರು, ಈ ಕೂಡಲೇ ಆಯಾ ಶಾಲೆಗಳ ಮುಖ್ಯಸ್ಥರಿಂದಲೇ ವಿದ್ಯಾರ್ಥಿಗಳ ಬಟ್ಟೆ ಖರೀದಿಸಿ ಹಂಚಿಕೆಗೆ ಆದೇಶಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here