ಸುರಪುರ: ಸ್ಥಳಿಯ ಸಂಸ್ಥೆಯಾದ ನಗರಸಭೆಗೆ ಚುನಾವಣೆ ಮುಗಿದು ವರ್ಷವೆ ಕಳೆದರೂ ಇದುವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವಾಗದೆ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ನಗರದ ಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು.
ಈ ಹಿಂದೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕಕ್ಕೆ ಮೀಸಲಾತಿ ಪ್ರಕಟಿಸಿದ್ದ ಸರ್ಕಾರ ನೇಮಕಗೊಳಿಸದೆ ಇಲ್ಲಿಯವರೆಗೆ ಮುಂದೂಡುತ್ತಾ ಬಂದಿತ್ತು.ಈಗ ರಾಜ್ಯದ ಎಲ್ಲಾ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ನೇಮಕದ ಮೀಸಲಾತಿ ಪ್ರಕಟಿಸಿದ್ದು, ಅದರಂತೆ ಸುರಪುರ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಹಾಗು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಎಂದು ಘೋಷಿಸಿದೆ.ಈ ಹಿಂದೆ ಪ್ರಕಟವಾಗಿದ್ದ ಮೀಸಲು ಪರ ವಿರೋಧವಾಗಿ ಮುಸುಕಿನ ಗುದ್ದಾಟ ನಡೆದಿತ್ತು.
ಈಗ ಪುನಃ ಮೀಸಲಾತಿ ಪ್ರಕಟವಾಗಿದ್ದು ಮತ್ತೆ ನಗರಸಭೆ ಸದಸ್ಯರುಗಳ ಮದ್ಯೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗುವ ಸಾಧ್ಯತೆ ಇದೆ.