ಕೊಲೆಗೈದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ.

0
352

ಯಡ್ರಾಮಿ: ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ದಿನ ಪರಿಶಿಷ್ಠ ಪಂಗಡದ ಯುವಕ ಮಲ್ಲು ದೊರೆಯನ್ನು ಕರೆದೊಯ್ದು ಚಿತ್ತಾಪೂರ ತಾಲೂಕಿನ ಮಡಬಾಳ ಗ್ರಾಮದ ಬಳಿ ಕೊಲೆ ಮಾಡಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಮತ್ತು ಕೊಲೆಯಾದ ಯುವಕನ ಕುಟುಂಬಕ್ಕೆ ಸೂಕ್ತ ಪೋಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಆಗ್ರಹಿಸಿ ೨೦೦ಕ್ಕೂ ಹೆಚ್ಚು ಜನತೆ ತಹಸೀಲದಾರ್ ಬಸಲಿಂಗಪ್ಪ ನಾಯ್ಕೋಡಿ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ ಹೋಳಿ ಹುಣ್ಣಿಮೆ ದಿನ ನಡೆದ ಕಾಖಂಡಕಿ ಗ್ರಾಮದ ನಿವಾಸಿ ಮಲ್ಲು ದೊರೆ ಕೊಲೆಯ ಹಿನ್ನಲೆಯಲ್ಲಿ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ ಕಚೇರಿವರೆಗೂ ಸರ್ಕಾರ ಮತ್ತು ಈ ಕೇಸಿಗೆ ಸ್ಪಂದಿಸದ ಅಧಿಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪ.ಪಂ ಕಲಬುರ್ಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಗುರುರಾಜ ಎಸ್ ಸುಬೇದಾರ ಮಾತನಾಡಿ ಯಡ್ರಾಮಿ ಮತ್ತು ಜೇವರ್ಗಿಯ ಉಭಯ ತಾಲೂಕುಗಳಲ್ಲಿ ಪರಿಶಿಷ್ಠ ಪಂಗಡದ ಸಮುದಾಯದ ಮೇಲೆ ನಿರಂತರವಾಗಿ ಬೇರೆ ಸಮುದಾಯದವರಿಂದ ಮಹಿಳೆಯರು, ಯುವಕರು, ಹಿರಿಯರ ಮೇಲೆ ಜೀವ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಲೇ ಇವೆ. ಕಳೆದ ದಿನಗಳ ಹಿಂದೆ ರಾತೋ ರಾತ್ರಿ ಎಸ್.ಟಿ ಕಾಲೋನಿಗೆ ನುಗ್ಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ದ ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಕೂಡ ಇಲ್ಲಿವರೆಗೂ ಕೋರ್ಟಗೆ ಪೋಲೀಸ್ ಅಧಿಕಾರಿಗಳು ಚಾರ್ಜ ಶೀಟ್ ಸಲ್ಲಿಸಿರುವದಿಲ್ಲ. ಠಾಣೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಕಾರಣ ಜನಾಂಗದವರು ನಿತ್ಯವೂ ಠಾಣೆಗೆ ಅಲೆಯುವಂತಾಗಿದೆ.

Contact Your\'s Advertisement; 9902492681

ಅದಲ್ಲದೇ ನಾಯಕ ಜನಾಂಗದವರ ಮೇಲೆ ಕೇಸು ವಾಪಸ್ಸು ತೆಗೆದುಕೊಳ್ಳುವಂತೆ ಬೆದರಿಕೆ ಹಾಕಲಾಗುತ್ತಿದೆ. ಇಂತಹ ವರ್ತನೆಗಳು ನಿಲ್ಲಬೇಕು ಮತ್ತು ಆದಷ್ಟು ಬೇಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಭಯ ತಾಲೂಕುಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ತಹಸೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಮಾತನಾಡಿ ಜಿಲಾಧಿಕಾರಿಗಳ ಮೂಲಕ ಸಂಭಂಧಪಟ್ಟ ಅಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಈ ಮನವಿ ತಲುಪಿಸಲಾಗುವದು ಎಂದರು.

ಈ ಸಂಧರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜೇವರ್ಗಿ ತಾಲೂಕ ಅಧ್ಯಕ್ಷ ವೀರಘಂಟೆಪ್ಪ ಏವೂರ, ವೆಂಕಟರಮಣ ಕೊಡಚಿ, ಭೀಮರಾಯ ಸುಬೇದಾರ, ಯಡ್ರಾಮಿ ತಾಲೂಕ ಅಧ್ಯಕ್ಷ ವೆಂಕುಬಾ ದೊಡ್ಮನಿ, ನಿಂಗೂ ಅವರಾದ, ಶ್ರೀಶೈಲ ದೊರಿ, ಮಹಾಂತೇಶ ದೊರಿ, ಚಂದ್ರು ಮಲ್ಲಾಬಾದ್, ರಮೇಶ ಮೇಲಕೇರಿ, ಗುರುರಾಜ ಸೂಲಹಳ್ಳಿ, ವಿಶ್ವಮದಕರಿ ಜೇವರ್ಗಿ, ಬಸವರಾಜ ಹೊಸಮನಿ, ದೊಡ್ಡೇಶ ಕಾಚಾಪೂರ, ಕೃಷ್ಣಪ್ಪ ದಳವಾಯಿ, ಗುಂಡಪ್ಪ ಮುತ್ತಕೋಡ, ಶಂಕರ ಕಿಲೇದಮನಿ, ನಿಂಗೂ ಇಜೇರಿ, ಈರಪ್ಪ ಯಡ್ರಾಮಿ ಸೇರಿದಂತೆ
ಕೊಲೆಯಾದ ಯುವಕನ ಕುಟುಂಬಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here