ಶಹಾಬಾದ: ಚಿತ್ತಾಪುರ ತಾಲೂಕಿನ ಗ್ರಾಮಗಳ ಅಭಿವೃದ್ದಿಗೆ ಶಾಸಕ ಪ್ರಿಯಂಕ ಖರ್ಗೆ ಹೆಚ್ಚಿನ ಒತ್ತು ನೀಡಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷವಾಗಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಹೇಳಿದರು.
ಅವರು ಭಂಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಗಿ ಗ್ರಾಮದಿಂದ, ಭಂಕೂರ ಗ್ರಾಮದವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ೪.೨೫ ಕೋ.ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಾಂಬರ ರಸ್ತೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ಪ್ರಿಯಾಂಕ್ ಖರ್ಗೆ ಅವರು ಗ್ರಾಮಗಳ ಅಭಿವೃದ್ಧಿಯೊಂದಿಗೆ ಶೈಕ್ಷಣಿಕವಾಗಿ ಅಭಿವೃದ್ಧಿಗೆ ಹಲವಾರು ವಸತಿ ಶಾಲೆಗಳನ್ನು ತಾಲೂಕಿಗೆ ತಂದಿದ್ದಾರೆ.ಅಲ್ಲದೇ ರಸ್ತೆ, ನೀರು, ಶಾಲೆ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ದಿಯನ್ನು ಕೈಗೊಂಡಿದ್ದಾರೆ ಎಂದು ಹೇಳಿದರು. ಗುತ್ತಿಗೆದಾರರು ಎರಡು ತಿಂಗಳಲ್ಲಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕೆಂದು ತಾಕೀತು ಮಾಡಿದರು.
ಗ್ರಾಮದ ಮುಖಂಡರಾದ ಅಜೀಮ್ ಸೇಠ, ಜಿಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಶಹಾಬಾದ್ ಬಿಸಿಸಿ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಹಿರೇಮಠ, ಗ್ರಾಪಂ.ಸದಸ್ಯ ಶರಣಬಸಪ್ಪ ಧನ್ನಾ, ಮುಖಂಡರಾದ ಶರಬಣ್ಣಾ ಮಾವೂರ, ಭೀಮಾಶಂಕರ ನಾಟೀಕಾರ, ಕೆಂಚಪ್ಪ ಪೂಜಾರಿ, ತಿಪ್ಪಣ್ಣ ಮಾಡಬೂಳ, ಮುಜಾಹೀದ್ ಭಂಕೂರ, ಭರತ ಧನ್ನಾ, ಶಿವಪ್ಪ ಜಿರಕಲ್, ರಾಹುಲ್ ಜಿರಕಲ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.