ಸುರಪುರ: ಈಗಾಗಲೆ ದೇಶದಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಕೊರೊನಾ ವೈರಸ್ ಬಗ್ಗೆ ತಾಲೂಕಿನಲ್ಲಿ ಜಾಗೃತಿ ಮೂಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ,ಕೊರೊನಾ ವೈರಸ್ ಎಂಬ ಮಹಾಮಾರಿ ಕಲಬುರ್ಗಿಗೆ ಬಂದು ಒಬ್ಬರನ್ನು ಬಲಿ ಪಡೆದಿದೆ.ಇದರಿಂದ ಇಡೀ ಕಲ್ಯಾಣ ಕರ್ನಾಟಕ ಜನತೆಯೆ ಆತಂಕಕ್ಕೆ ಒಳಗಾಗಿದ್ದಾರೆ.ಅದರಲ್ಲಿ ನಮ್ಮ ಸುರಪುರ ತಾಲೂಕಿನ ಜನತೆ ಅತಿ ಹೆಚ್ಚು ಆಸ್ಪತ್ರೆಗಳಿಗಾಗಿ ಕಲಬುರ್ಗಿಗೆ ಹೋಗಬೇಕಾಗಿದೆ.ಆದ್ದರಿಂದ ಕಲಬುರ್ಗಿಯಲ್ಲಿಯೇ ವ್ಯಕ್ತ ಬಲಿಯಾಗಿದ್ದರಿಂದ ಜನತೆ ಕಲಬುರ್ಗಿಗೆ ಹೋಗಲು ಭಯಪಡುವಂತಾಗಿದೆ.ಆದ್ದರಿಂದ ತಾಲೂಕು ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಕೊರೊನಾ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಅರಿವು ಮೂಡಿಸಬೇಕು ಮತ್ತು ಪ್ರತಿಯೊಬ್ಬರು ಮುಂಜಾಗ್ರತೆಗಾಗಿ ಮಾಸ್ಕ್ ಧರಿಸಲು ಆರೋಗ್ಯ ಇಲಾಖೆಯಿಂದ ವಿತರಿಸುವಂತಾಗಬೇಕು.
ಹೊರಗಡೆ ಅಂಗಡಿಗಳಲ್ಲಿ ಮಾಸ್ಕ್ ಖರೀದಿಸಲು ಹೋದರೆ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದ್ದಾರೆ.ಇದರಿಂದ ಜನರುಕೂಡ ಮಾಸ್ಕ್ ಖರಿದಿಸದಂತ ಸ್ಥಿತಿ ಮಾರಟಗಾರರು ನಿರ್ಮಾಣ ಮಾಡಿದ್ದಾರೆ.ಆದ್ದರಿಂದ ಮಾಸ್ಕ್ ಮಾರಟಗಾರರ ಮೇಲು ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲರಿಗು ಮಾಸ್ಕ್ ಆರೋಗ್ಯ ಇಲಾಖೆಯಿಂದ ವಿತರಿಸಬೇಕು.ಅದರಲ್ಲು ವಿಶೇಷವಾಗಿ ಈಗ ಪರೀಕ್ಷಾ ಸಮಯವಾದ್ದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನಗರಕ್ಕೆ ಬರುತ್ತಾರೆ.ಎಲ್ಲಾ ವಿದ್ಯಾರ್ಥಿಗಳಿಗು ಅವಶ್ಯವಾಗಿ ಮಾಸ್ಕ್ ದೊರೆಯಲು ಬಸ್ ನಿಲ್ದಾಣ ಮತ್ತು ಆಯಾ ಪರೀಕ್ಷಾ ಕೇಂದ್ರಗಳಲ್ಲು ವಿತರಿಸುವ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬರೆದ ಮನವಿಯನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.