ಕುಂಬಾರ ಓಣಿಯ ಸಮುದಾಯ ಭವನ ಉದ್ಘಾಟನೆ ಮಾಡಲು ಸಾರ್ವಜನಿಕರ ಮನವಿ

0
90

ಸುರಪುರ: ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಗಾದೆಯಂತೆ ಕಳೆದ ೨೦೧೫-೧೬ನೇ ಸಾಲಿನ ಸ್ಥಳಿಯ ಶಾಸಕರ ಅನುದಾನದಡಿಯಲ್ಲಿ ನಗರದ ರಂಗಂಪೇಟೆಯ ಆಟೋ ನಿಲ್ದಾಣ ಬಳಿಯಲ್ಲಿನ ಕುಂಬಾರ ಓಣಿಯ ಸಮುದಾಯ ಭವನ ನಿರ್ಮಾಣಗೊಂಡು ಮೂರು ವರ್ಷವಾಗುತ್ತಿದ್ದರು ಇನ್ನೂ ಉದ್ಘಾಟನೆಯಾಗದೆ ಹಾಗೆಯೇ ಉಳಿದಿದೆ.

ಅಂದಿನ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕರಿಗೆ ತಾಲೂಕಿನ ಕುಂಬಾರ ಸಮುದಾಯದ ಜನರು ಮನವಿ ಮಾಡಿಕೊಂಡು ಸಮುದಾಯ ಭವನ ನಿರ್ಮಿಸಿಕೊಡಲು ವಿನಂತಿಸಿದ್ದರು.ಅದರಂತೆ ಶಾಸಕರು ತಮ್ಮ ಸ್ಥಳಿಯ ಪ್ರದೇಶ ಅಭಿವೃಧ್ಧಿ ಅನುದಾನದಡಿಯಲ್ಲಿ ೧೫ ಲಕ್ಷ ರೂಪಾಯಿಗಳ ಮಂಜೂರು ಮಾಡಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು.ಕಾಮಗಾರಿಯನ್ನು ಲೋಕೊಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಲೋಕೊಪಯೋಗಿ ಇಲಾಖೆ ಟೆಂಡರ್ ಮಾಡಿ,ಗುತ್ತಿಗೆದಾರರಿಗೆ ನೀಡಿದ್ದರಿಂದ,ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಿಕೊಟ್ಟಿದ್ದಾರೆ.ಆದರೆ ಲೋಕೊಪಯೋಗಿ ಇಲಾಖೆ ಮಾತ್ರ ಇದುವರೆಗು ಕಟ್ಟಡವನ್ನು ತಾಲೂಕು ಆಡಳಿತಕ್ಕೆ ನೀಡಿಲ್ಲ.ಇದರಿಂದ ಕುಂಬಾರ ಸಮುದಾಯದ ಜನತೆ ದಿನಾಲು ಕಟ್ಟೆವನ್ನು ನೋಡುತ್ತಾ ಉಪಯೋಗಕ್ಕೆ ಕೊಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Contact Your\'s Advertisement; 9902492681
ನಮ್ಮ ಬೇಡಿಕೆಯಂತೆ ಸರಕಾರ ಭವನ ನಿರ್ಮಾಣ ಮಾಡಿದೆ ಆದರೆ ಉಪಯೋಗಕ್ಕೆ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ.ಮಾನ್ಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಕೂಡಲೆ ಭವನ ಉದ್ಘಾಟನೆ ಮಾಡಿ ನಮಗೆ ಉಪಯೋಗಕ್ಕೆ ಒದಗಿಸುವಂತೆ ಬೇಡಿಕೊಳ್ಳುತ್ತೇವೆ. -ಸಾಹೇಬಗೌಡ ಕುಂಬಾರ ಸಮಾಜದ ತಾಲೂಕು ಉಪಾಧ್ಯಕ್ಷರು
ನಮ್ಮ ಸಮಾಜದ ಜನರು ಯಾವುದೆ ಸಭೆ ಸಮಾರಂಭ ಮಾಡಲು ಜಾಗವಿಲ್ಲದೆ ತುಂಬಾ ತೊಂದರೆಯಾಗಿದೆ.ಭವನ ನಿರ್ಮಾಣ ಮಾಡಿದರು ಉಪಯೋಗಕ್ಕಿಲ್ಲದಂತಾಗಿದೆ.ಆದಷ್ಟು ಬೇಗ ಸರಕಾರ ಉದ್ಘಾಟನೆ ಮಾಡಿ ಕೊಡಬೇಕೆಂದು ವಿನಂತಿಸುತ್ತೇವೆ. – ಮಡಿವಾಳಪ್ಪ ಕುಂಬಾರ

ಇನ್ನು ಸುಮಾರು ೧೫ ಲಕ್ಷ ರೂಪಾಯಿ ಹಣ ವ್ಯಯಿಸಿ ಕಾಮಗಾರಿ ಮುಗಿಸಿಕೊಟ್ಟಿರುವ ಗುತ್ತಿಗೆದಾರರಿಗು ಇನ್ನು ಬಿಲ್ ಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ.ಆದರೆ ಲೋಕೊಪಯೋಗಿ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.ಅತ್ತ ಕಾಮಗಾರಿ ಮುಗಿದು ಮೂರು ವರ್ಷವಾದರೂ ಉದ್ಘಾಟನೆಯಾಗದೆ ಉಳಿದಿದ್ದರಿಂದ ಕಟ್ಟಡದ ಸರಿಯಾದ ನಿರ್ವಹಣೆ ಇಲ್ಲದೆ ಬಳಿದಿರುವ ಬಣ್ಣಕೂಡ ಮಾಸುತ್ತಿದೆ.ಆದರೆ ಇಲಾಖೆ ಇದರತ್ತ ಗಮನ ಹರಿಸುತ್ತಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಕಟ್ಟಡ ನಿರ್ಮಾಣಗೊಂಡು ಮೂರು ವರ್ಷವಾದರು ಉದ್ಘಾಟನೆಯಾಗದ ಈ ಸಮುದಾಯ ಭವನ ಹಾಳಾಗುವ ಮುನ್ನ ಜಿಲ್ಲಾಧಿಕಾರಿಗಳಾಗಲಿ,ಸ್ಥಳಿಯ ಶಾಸಕರಾಗಲಿ ಮತ್ತು ತಾಲೂಕು ಆಡಳಿತವಾಗಲಿ ಇದರತ್ತ ಗಮನ ಹರಿಸಿ ಶೀಘ್ರವೆ ಜನರ ಉಪಯೋಗಕ್ಕೆ ನೀಡಿದರೆ ಕಾಮಗಾರಿ ನಿರ್ಮಾಣಗೊಂಡಿದ್ದಕ್ಕು ಸಾರ್ಥಕವಾಗಲಿದೆ.ಅಲ್ಲದೆ ಹಿಂದೆ ತಮಗೆ ಸಮುದಾ ಭವನದ ಅವಶ್ಯಕತೆಯಿದೆ ಎಂದು ಮನವಿ ಮಾಡಿಕೊಂಡಿದ್ದ ಕುಂಬಾರ ಸಮುದಾಯಕ್ಕೂ ಭವನ ಲಭ್ಯವಾದಲ್ಲಿ ಸಂತೋಷವಾಗಲಿದೆ.ಈಗಲಾದರು ಕುಂಬಾರ ಓಣಿಯ ಸಮುದಾ ಭವನದ ಉದ್ಘಾಟನೆಯತ್ತ ಸರಕಾರ ಗಮನ ಹರಿಸುವುದೆ ಕಾದು ನೋಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here