ಲಂಚಾ ಪಡೆಯುತ್ತಿದಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ತಾ.ಪಂ ಎಸ್.ಡಿ.ಎ ಅಧಿಕಾರಿ

0
98

ಕಲಬುರಗಿ: ಪಂಚಾಯತ್  ದ್ವಿತೀಯ ದರ್ಜೆ ಸಹಾಯಕ, ಪಿಡಿಒ ಒರ್ವರಿಂದ ಲಂಚಾ ಸ್ವೀಕರುಸುತಿದ್ದಾಗ ಎಸಿಬಿ ಬಲೆಗೆ  ರೆಡ್ ಹ್ಯಾಂಡ್ ಸಿಕಾಕಿಕೊಂಡಿರುವ ಘಟನೆ ತಾಲೂಕು ಪಂಚಾಯತ್ ನಲ್ಲಿ ನಡೆದಿದೆ.

ನಿಜಲಿಂಗಪ್ಪ ಪಂಚಾಯತ್ ದ್ವಿತೀಯ ದರ್ಜೆ ಸಹಾಯಕ ಎಂಬಾತ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜೇವರ್ಗಿ ತಾಲೂಕಿನ ಅವರಾದಿ (ಬಿ) ಗ್ರಾಮ ಪಂಚಾಯತಿ ಪಿಡಿಒ ಶರಣುಗೌಡ ಎಂಬುವರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಸಿಕಾಕಿಕೊಂಡಿದಾರೆ ಎನ್ನಲಾಗಿದ್ದು, ಕಿಣ್ಣಿಯಿಂದ ಅವರಾದ (ಬಿ) ಗ್ರಾಮಕ್ಕೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಎಲ್​ಪಿಸಿ ಮತ್ತು ಸೇವಾ ಪುಸ್ತಕಗಳನ್ನು ಜೇವರ್ಗಿ ತಾಲೂಕು ಪಂಚಾಯತಿ ಕಚೇರಿಗೆ ವರ್ಗಾಯಿಸಲು ಕೆಳಿಕೊಂಡಿದ್ದರು ಎನ್ನಲಾಗಿದೆ. ಈ ಕೆಲಸಕ್ಕಾಗಿ ಶರಣಗೌಡನಿಗೆ, ನಿಜಲಿಂಗಪ್ಪ 15 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತಿ ಕಚೇರಿಯಲ್ಲಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದಾರೆ.

Contact Your\'s Advertisement; 9902492681

ಎಸಿಬಿ ಎಸ್.ಪಿ ವಿ.ಎಂ ಜೋತಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಭ್ರಷ್ಟಚಾರದ ಆರೋಪಿ ನಿಜಲಿಂಗಪ್ಪಗೆ ಬಂಧಿಸಿ, ಈ ಕುರಿತು ಎಸಿಬಿ ಅಧಿಕಾತಿಗಳು ವಿಚಾರಣೆ ನಡೆಸುತ್ತಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here