ಪಾಪು ಸಾಹಿತ್ಯ ಲೋಕದ ಧ್ರುವತಾರೆ: ವಿಶ್ವಾರಾಧ್ಯ ಸತ್ಯಂಪೇಟೆ.

0
69

ಶಹಾಪುರ: ಪಾಟೀಲ ಪುಟ್ಟಪ್ಪನವರು ಸರಳ ಹಾಗೂ ನೇರ ನುಡಿಯ ವ್ಯಕ್ತಿತ್ವದ ಜೊತೆಗೆ ಸಾಹಿತ್ಯ, ಹೋರಾಟ,ಮತ್ತು ಪತ್ರಿಕಾ ರಂಗ ಹೀಗೆ ಹತ್ತಾರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಯಾಗಿ ಮೆರೆದವರು ಎಂದು ಸಾಹಿತಿ,ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ.

ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಡಾ. ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ ಪಾಟೀಲ ಪುಟ್ಟಪ್ಪನವರ ಅಕಾಲಿಕ ಮರಣದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತೀವ್ರ ದುಃಖ ವ್ಯಕ್ತಪಡಿಸಿದರು,ಅವರಂಥ ಅಪ್ರತಿಮ ಪ್ರಾಮಾಣಿಕತೆಗೆ ಸರಿಸಾಟಿ ಯಾರೂ ಇಲ್ಲ ಎಂದು ಬಣ್ಣಿಸಿದರು.ಅಂಥ ಕಷ್ಟದ ಕಾಲದಲ್ಲಿಯೂ ಅವರು ಏಳು ಪತ್ರಿಕೆಗಳು ಪ್ರಕಟಿಸಿ ನಡೆಸುತ್ತಿದ್ದರು.

ಹಿರಿಯ ಸಾಹಿತಿ ಪ್ರೋ. ದೊಡ್ಡಬಸಪ್ಪ ಬಳೂರಗಿಯವರು ಮಾತನಾಡಿ ಪಾಪು ಅವರು ನೇರ ನುಡಿಯ ದಿಟ್ಟ ಬರಹಗಾರ,ಅವರ ಸೃಜನಶೀಲತೆ ಬರವಣಿಗೆಯ ಜೊತೆಗೆ ಅವರ ಸಾಧನೆ ಅನನ್ಯವಾಗಿದ್ದು ಲಕ್ಷಾಂತರ ಶಿಷ್ಯಂದಿರ ಬಳಗ ಹೊಂದಿದ್ದಾರೆ ಎಂದು ಹೇಳಿದರು.ಅವರ ಆದರ್ಶ ತತ್ವಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಶಿವಣ್ಣ ಇಜೇರಿ,ಶರಣ ಸಾಹಿತಿ ಲಿಂಗಣ್ಣ ಪಡಶೆಟ್ಟಿ, ಉದ್ದಿಮೆದಾರರಾದ ಬಸವರಾಜ ಹಿರೇಮಠ,ಗುಂಡಪ್ಪ ತುಂಬಿಗಿ, ನಿವೃತ್ತ ತಹಸೀಲ್ದಾರರಾದ ಸಾಯಿಬಣ್ಣ ಮಡಿವಾಳಕರ,
ಡಾ. ಗುರುರಾಜ್ ಬಳೂರ್ಗಿ ವೀರಭದ್ರಸ್ವಾಮಿ ಅಯ್ಯಾಳ, ಕುಮಾರ್ ಅಲ್ಲಮ್ಮ ಪ್ರಭು ಪಂಪನಗೌಡ ಮಳಗ,ಚೌಡಪ್ಪ ಕೊಲ್ಲೂರು,ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here