ಸತ್ಯ, ನೇರ ನುಡಿಯ ಪ್ರತಿಪಾದಕ ಪಾಟೀಲ ಪುಟ್ಟಪ್ಪ: ಸಾರಂಗಧರ ಶ್ರೀಗಳು

0
57

ಕಲಬುರಗಿ: ಅಖಂಡ ಕರ್ನಾಟಕವನ್ನು ಕಟ್ಟಲು ಶ್ರಮಿಸಿದ ಕನ್ನಡದ ಕಟ್ಟಾಳು ಹಿರಿಯ ಹೋರಾಟಗಾರ-ಪತ್ರಕರ್ತ ಪಾಟೀಲ ಪುಟ್ಟಪ್ಪನವರಾಗಿದ್ದರು. ಕರ್ನಾಟಕದ ದಕ್ಷಿಣ-ಉತ್ತರ ಕರ್ನಾಟಕದ ನಡುವಿನ ಅಂತರವನ್ನು ಅಳಿಸಿ ನಾಡಿನ ಒಟ್ಟು ಪ್ರಗತಿಗಾಗಿ ಜೀವ ಸವೆಸಿದ ಪಾಟೀಲ ಪುಟ್ಟಪ್ಪ ನವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದು ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಸುಲಫಲ ಮಠದಲ್ಲಿ ಜರುಗಿದ ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ನವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪಾಪು ಎಂದೇ ಜನಜನಿತರಾಗಿದ್ದ ಪಾಟೀಲ ಪುಟ್ಟಪ್ಪ ನವರು ನಿಧನರಾಗಿದ್ದಕ್ಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳುವಾಗ, ಅವರೊಂದಿಗಿನ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಗಳಗಳನೆ ಕಣ್ಣಿರಿಟ್ಟರು.

Contact Your\'s Advertisement; 9902492681

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸುದೀರ್ಘ ಒಂದು ಶತಮಾನಕ್ಕೂ ಹೆಚ್ಚು ಕಾಲ ಬದುಕಿ ಬಾಳಿದ ಪಾಟೀಲ ಪುಟ್ಟಪ್ಪನವರು, ತಮ್ಮ ಜೀವಿತದ ಕೊನೆಯ ಘಳಿಗೆಯವರೆಗೂ ಸತ್ಯ, ನೇರ ನುಡಿಯ ಪ್ರತಿಪಾದಕರಾಗಿದ್ದರು ಎಂದು ಹೇಳಿದರು.

ಚವದಾಪುರಿ ಹಿರೇಮಠದ ಪೂಜ್ಯ ಶ್ರೀ ರಾಜಶೇಖರ ಶಿವಾಚಾರ್ಯರು, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಡಾ.ಬಾಬುರಾವ ಶೇರಿಕಾರ, ಹಣಮಂತರಾಯ ಅಟ್ಟೂರ, ರವಿಕುಮಾರ ಶಹಾಪುರಕರ್, ಸುರೇಶ ಬಡಿಗೇರ, ವಿಜಯಕುಮಾರ ತೇಗಲತಿಪ್ಪಿ, ಶರಣರಾಜ್ ಛಪ್ಪರಬಂದಿ, ಪ್ರಭುದೇವ ಯಳವಂತಗಿ, ಪ್ರಭುಲಿಂಗ ಮೂಲಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here