ಶಹಾಬಾದ: ಕೊರೊನಾ ವೈರಸ್ ಹರಡದಂತೆ ತಹಸೀಲ್ದಾರ ಸುರೇಶ ವರ್ಮಾ,ಪೌರಾಯುಕ್ತ ವೆಂಕಟೇಶ, ಪಿಐ ಅಮರೇಶ.ಬಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಅವರ ತಂಡ ನಗರದ ಮುಖ್ಯ ಮಾರ್ಕೆಟನಲ್ಲಿ ಸಂಚರಿಸಿ ಕೊರನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳನ್ನು ತಿಳಿಸಿದರಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ನಗರದ ಮಜ್ಜಿದ್ ಚೌಕ್, ತರಕಾರಿ ಮಾರ್ಕೆಟ್ ಸೇರಿದಂತೆ ರೇಲ್ವೆ ನಿಲ್ದಾಣವರೆಗೆ ಮಹಾಮಾರಿ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ನಗರದ ಹೊಟೇಲ್, ವೈನಶಾಪ್, ಬಾರ್‌ಗಳು ಮುಚ್ಚಲಾಗಿತ್ತು. ನಗರದ ಬಹುತೇಖ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.
ಮದುವೆ ,ಸಭೆ ಸಮಾರಂಭಗಳು ನಡೆಸಬೇಕಾದರೆ ಕೇವಲ ಹತ್ತು ಜನ ಇರಬೇಕು.ಇಲ್ಲದಿದ್ದರೇ ಕಾರ್ಯಕ್ರಮವನ್ನು ಮುಂದೂಡಿ.ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ.ಅಲ್ಲದೇ ದೇವನ ತೆಗನೂರಿನ ಶಿವಯೋಗೇಶ್ವರ ಜಾತ್ರೆ ರದ್ದುಪಡಿಸಲಾಗಿದೆ. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.
ನಗರದ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಮಾರಾಟಗಾರರು ಎಲ್ಲೆಂದರಲ್ಲಿ ಎಸೆದ ಹಸಿ ತ್ಯಾಜ್ಯ ತರಕಾರಿಯನ್ನು ಕಂಡು ತಹಸೀಲ್ದಾರ ಕೆಂಡಾಮಂಡಲರಾದರು.ಕೂಡಲೇ ಯಾರು ಈ ತ್ಯಾಜ್ಯವನ್ನು ಎಸೆದಿದ್ದಾರೆ ಅವರು ಕೂಡಲೇ ಇಲ್ಲಿಂದ ತೆಗೆಯಿರಿ.ಅಲ್ಲದೇ ಎಲ್ಲರೂ ತಮ್ಮ ವ್ಯಯಕ್ತಿಕ ಸ್ವಚ್ಛತೆ ಕಡೆಗೆ ಗಮನಕೊಡಿ. ,ಆಸ್ಕ್ ಧರಿಸಿ. ಜನಜಂಗುಳಿ ಇರುವಂಥ ಸ್ಥಳಗಳಲ್ಲಿ ಭಾಗವಹಿಸಬೇಡಿ. ಕಸವನ್ನು ಸಂಗ್ರಹಿಸಿ.ನಂತರ ಪೌರಕಾರ್ಮಿಕರು ಬಂದಾಗ ನೀಡಿ. ಕಸ ಎಲ್ಲೆಂದರಲ್ಲಿ ಎಸೆದರೇ ನಿಮ್ಮ ಅಂಗಡಿ ಲೈಸನ್ಸ್ ರದ್ದು ಮಾಡಲಾಗುವುದು. ತರಕಾರಿಯನ್ನು ಅಂಗಡಿಯೊಳಗೆ ಇಟ್ಟು ಮಾರಾಟ ಮಾಡಬೇಕು.ಅದನ್ನು ಬಿಟ್ಟು ಅಂಗಡಿ ಮುಂದೆ ಇಟ್ಟು ತರಕಾರಿ ಮಾರಾಟ ಮಾಡುವವರಿಂದ ರಸ್ತೆ ಇಕ್ಕಟ್ಟಾಗಿ ಜನ ಸಂಚಾರಕ್ಕೆ ತೊಂದರೆಯಾಗುತ್ತದೆ.ಕೂಡಲೇ ಅಂಗಡಿಯೊಳಗಿಟ್ಟು ಮಾರಾಟ ಮಾಡಿ,ಇಲ್ಲದಿದ್ದರೇ ನಿಮ್ಮ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಧ್ವನಿ ವರ್ಧಕಗಳ ಮೂಲಕ ಹಾಗೂ ನಗರದ ಗಲ್ಲಿಗಲ್ಲಿಗಳಲ್ಲಿ ಪೋಸ್ಟರ ಕಟ್ಟುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಹೊಟೇಲ್,ಬಾರ್,ವೈನ್‌ಶಾಪ್, ಲಾಡ್ಜಗಳನ್ನು ಬಂದ್ ಮಾಡಿಸಲಾಗಿದೆ. ಅಲ್ಲದೇ ನಗರದ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರಿಗೆ ಬೇಕಾದ ಸಲಕರಣೆಗಳನ್ನು ಕರೀದಿಸಲಾಗಿದೆ. ನಗರದ ಸ್ವಚ್ಛತೆ ಕಡೆಗೂ ಗಮನಕೊಡಲಾಗುತ್ತದೆ. – ವೆಂಕಟೇಶ ಪೌರಾಯುಕ್ತ ನಗರಸಭೆ ಶಹಾಬಾದ.
ಅಲ್ಲದೇ ಕೆಲವು ಕಡೆಗಳಲ್ಲಿ ಸ್ವೀಟ್ ಅಂಗಡಿ, ಜ್ಯೂಸ್ ಸೆಂಟರ್‌ಗಳಲ್ಲಿ ಜನಗಳು ಸೇರಿದನ್ನು ಕಂಡು ಪೌರಾಯುಕ್ತರು ಅಂಗಡಿ ಮುಚ್ಚಿಸಿದರು.ಅಲ್ಲಿಂದ ಜನರನ್ನು ಚದುರಿಸಿದರು.ಅಲ್ಲದೇ ಪ್ರತಿ ಅಂಗಡಿಗಳ ಮುಂದೆ ಒಂದು ಕಸದ ಬುಟ್ಟಿಯನ್ನಿಟ್ಟು ಅದರಲ್ಲಿಯೇ ಕಸವನ್ನು ಹಾಕಿ.ದಿನನಿತ್ಯ ಬರುವ ಕಸವನ್ನು ನಗರಸಭೆಯ ಪೌರಕಾರ್ಮಿಕರು ತೆಗೆದುಕೊಂಡು ಹೋಗುತ್ತಾರೆ.ಆದರೆ ಎಲ್ಲೆಂದರಲ್ಲಿ ಎಸೆದರೇ ಅವರಿಗೆ ದಂಡ ಹಾಕಲಾಗುವುದು.ಅಲ್ಲದೇ ಮಜ್ಜಿದ್ ಸಮೀಪದ ಖಾಸಗಿ ಮಳಿಗೆ ಕಟ್ಟಡದ ಮುಂಭಾಗದ ರಸ್ತೆಯ ಮೇಲೆ ಕಂಕರ್ ಹಾಕಿದನ್ನು ಕೂಡಲೇ ತೆಗೆಯಬೇಕು ಎಂದು ಕಟ್ಟಡ ಮಾಲೀಕರಿಗೆ ಪಿಐ ಅಮರೇಶ.ಬಿ ಎಚ್ಚರಿಕೆ ನೀಡಿದರು.
ನಗರದ ಮುಖ್ಯ ಸ್ಥಳಗಳಲ್ಲಿ ಕ್ರಮಿಕೀಟಗಳನ್ನು ನಾಶಪಡಿಸಲು ಎಣ್ಣೆಯನ್ನು ಸ್ಪ್ರೇ ಮಾಡಲಾಯಿತು.ಇದೇ ರೀತಿ ನಗರ ಮುಖ್ಯ ಸ್ಥಳಗಳಲ್ಲಿ ಸಂಚರಿಸಿ ಸ್ವಚ್ಛತೆ ಬಗ್ಗೆ ಮತ್ತು ಕೊರೊನಾ ಹರಡದಂತೆ ಮುಂಜಾಗೃತ ಕ್ರಮಗಳನ್ನು ತಿಳಿಸಲಾಗುತ್ತಿದೆ.ಜನರು ಸಹಕಾರ ನೀಡುತ್ತಿದ್ದಾರೆ.ಒಟ್ಟಾರೆಯಾಗಿ ಕೊರೊನಾ ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದೆವೆ ಎಂದು ತಹಸೀಲ್ದಾರ ಸುರೇಶ ವರ್ಮಾ ಉದಯವಾಣಿಗೆ ತಿಳಿಸಿದರು.