ಕಲಬುರಗಿ: ಲಾರಿ ಚಾಲಕ ಓರ್ವನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಿಲತ್ತ ನಗರ ಬಡಾವಣೆಯ ಹೊರವಲಯದಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ.
ಮಿಲತ್ ನಗರ ನಿವಾಸಿಯಾಗಿರುವ ಮೊಹಮ್ಮದ್ ದಸ್ತೇಗಿರ ಗೊರೆಸಾಬ (35) ಕೊಲೆಯಾದ ವ್ಯಕ್ತಿ, ಇತ ಲಾರಿ ಚಾಲಕ ಎಂದು ಗುರುತಿಸಲಾಗಿದ್ದು, ಶುಕ್ರವಾರ ರಾತ್ರಿ ದಸ್ತೇಗಿರಗೆ ವಾರ್ಡ್ ಸಂಖ್ಯೆ 32ರ ಸಹಾರ ಲೇಔಟ್ ನ ಇನಾಮದಾರ ಇಜುಕೊಳದ ಹತ್ತಿರದ ಆತನ ಮಫಲರ್ ದಿಂದ ಕತ್ತು ಕಿಸುಕಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗುತಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸೋಮಲಿಂಗ್ ಕಿರದಳಿ, ಪಿ.ಎಸ್.ಐ ಎಸ್.ಎಸ್ ದೊಡ್ಡಮನಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆ ಮಾಡಿದ ಅಪರಾಧಿಗಳು ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.