ಮುಸ್ಲಿಂ ಬಾಂಧವರಿಂದ ಬಡ ಕಾರ್ಮಿಕರಿಗೆ ಉಚಿತ ಸಾಮಗ್ರಿಗಳ ವಿತರಣೆ

0
79

ಸುರಪುರ: ಕೊರೊನಾ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಸರಕಾರ ಉತ್ತಮವಾದ ಕ್ರಮವನ್ನು ಕೈಗೊಂಡಿದೆ.ರಾಜ್ಯಾದ್ಯಂತ ಲಾಕ್‌ಡೌನ್‌ಗೆ ಕರೆ ನೀಡಿದ್ದು,ಅದರ ಅಂಗವಾಗಿ ನಮ್ಮ ಸುರಪುರದಲ್ಲಿಯೂ ಎಲ್ಲರು ಲಾಕ್‌ಡೌನ್ ಆಚರಿಸುತ್ತಿದ್ದೆವೆ.ಆದರೆ ಅಂದೆ ದುಡಿದು ಬದುಕುವ ಬಡ ಕಾರ್ಮಿಕರ ಬಗ್ಗೆ ನಾವೆಲ್ಲರು ಕಾಳಜಿ ಹೊಂದುವ ಅವಶ್ಯವಿದೆ ಎಂದು ಜಾಮೀಯಾ ಅಹಲೆ ಹದೀಸ್ ಖುರೇಶಿ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಸಾಬ್ ಮಾತನಾಡಿದರು.

ನಗರದ ಖುರೇಶಿ ಮೊಹಲ್ಲಾದಲ್ಲಿ ಎಲ್ಲಾ ಸಮುದಾಯಗಳ ಬಡ ಕಾರ್ಮಿಕರಿಗೆ ಸುರಪುರ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ದೈನಂದಿನ ಬದುಕಿಗೆ ಕಷ್ಟವಾಗದಿರಲೆಂದು ಸುಮಾರು ೮೦ಕ್ಕೂ ಹೆಚ್ಚು ಕುಟುಂಬಗಳಿಗೆ ಅಕ್ಕಿ ಬೇಳೆ ಎಣ್ಣೆ ಸೇರಿದಂತೆ ವಿವಿಧ ಸಾಮಾಗ್ರಿಗಳ ವಿತರಿಸಿ ಮಾತನಾಡಿ,ಕೊರೊನಾ ಸೊಂಕು ನಿವಾರಣೆಗೆ ನಾವೆಲ್ಲರು ಸರಕಾರಕ್ಕೆ ಸಹಕಾರ ನಿಡೋಣ.ಬಡ ಜನತೆಗೆ ನಮ್ಮಿಂದಾಗುವ ಸಹಾಯ ಮಾಡುವ ಮೂಲಕ ಲಾಕ್‌ಡೌನ್‌ಗೆ ಸಹಕರಿಸೋಣ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಬ್ದುಲ್ ಗಫರ್,ಮಹ್ಮದ ಜಹೀರ್,ಮಹ್ಮದ ಶಕೀರ್,ಅಬ್ದುಲ್ ಸುಭಾನ್,ಮಹ್ಮದ ಲಿಯಾಖತ್,ಮಹ್ಮದ್ ಶಬ್ಬಿರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here