ಮದ್ಯ ಸಿಗದಿದಕ್ಕೆ ವ್ಯಕ್ತಿ ಆತ್ಮಹತ್ಯೆ.! ಕೇರಳದಲ್ಲಿ ಘಟನೆ

0
50

ಮಲಪ್ಪುರಂ: ಮದ್ಯ ಸಿಕ್ಕಿಲ್ಲವೇಂದು ಮನನೊಂದು ವ್ಯಕ್ತಿ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳ ರಾಜ್ಯದ ಮಲಪುರಂ ಜಿಲ್ಲೆಯಲ್ಲಿ ನಡೆದಿದೆ.

38 ವರ್ಷದ ಕೆ ಸನೋಜ್ ಆತ್ಯಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ದೇಶದೆಲೆಡೆ ಕೊರೋನಾ ವೈರಸ್ ಹರಡುತ್ತಿರುವುದು ಸಾರ್ವಜನಿಕರು ಭೀತಿಯಲ್ಲಿ ಬದುಕು ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಈ ಹೆನ್ನೆಲೆಯಲ್ಲಿ ದೇಶದ್ಯಂತ ಲಾಕ್ ಡೌನ್ ಘೋಷಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಎಲ್ಲ ಸೇವೆಗಳು ನಿಷೇಧಕ್ಕೆ ಒಳಗಾಗಿವೆ.

Contact Your\'s Advertisement; 9902492681

ಮೃತ ಸನೋಜ್ ಪೈಂಟರ್ ಆಗಿದ್ದು, ಮದ್ಯದ ದಾಸನಾಗಿದ್ದ. ಲಾಕ್‌ಡೌನ್‌ನಿಂದ ಮದ್ಯ ಸಿಗದೆ ಮನೆಯಲ್ಲಿ ವಿಪರೀತ ಗಲಾಟೆ ಮಾಡಿದ್ದ, ಹುಚ್ಚನಂತೆ ವರ್ತಿಸಿದ್ದ ಎಂದು ಸನೋಜ್ ಸಹೋದರ ತಿಳಿಸಿದ್ದಾನೆ. ಮದ್ಯಕ್ಕಾಗಿ ಗ್ರಾಮದಲ್ಲಿನ ಎಲ್ಲಾ ಶಾಪ್ ಓಡಾಡಿದ್ದಾನೆ, ಎಲ್ಲವೂ ಬಂದ್ ಆಗಿದ್ದು, ಪಣ್ಣಕ್ಕೆ ಹೋದರೆ ಸಿಗಬಹುದೆಂದು ತೆರಳಿದ್ದಾನೆ. ಅಲ್ಲೂ  ಸಿಗದ ಕಾರಣ ಹುಚ್ಚು ಹಿಡಿದವನಂತೆ ವರ್ತಿಸಿದ್ದಾನೆ.

ಮನಯವರಿಗೆ ಈತನ ವರ್ತನೆ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮದ್ಯ ಸಿಗಿದೆ ಕುಟುಂಬದ ಬಗ್ಗೆ ಯೋಚಿಸದೆ ನೇರವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳುದುಬಂದಿದೆ. ಜಿಲ್ಲೆಯ ಕುನ್ನಕುಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತೀ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯಗಳಲ್ಲಿ ಕೇರಳ ಮಂಚೂಣಿಯಲ್ಲಿದ್ದು, ಕಿಲೋಮೀಟರ್ ಗಟ್ಟಲೆ ಕ್ಯೂನಲ್ಲಿ ನಿಂತು ಮದ್ಯ ಖರೀದಿಸುತ್ತಾರೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಆನ್‌ಲೈನ್ ಮೂಲಕ ಮದ್ಯ ವಿತರಿಸಲು ಚಿಂತನೆ ನಡೆಸುತ್ತಿದೆ.

ಸದ್ಯ ದೇಶದಲ್ಲಿ ಕೊರೋನಾ ಮಹಾಮಾರಿ ಕಾಡುತ್ತಿದ್ದು, ಇದರಿಂದ ತಪ್ಪಿಸಿಕೊಳಲ್ಲು ಸರಕಾರ ಮತ್ತು ವೈದ್ಯರು ಸಾಕಷ್ಟು ಪ್ರಯತ್ನ ಮಾಡುತಿದ್ದಾರೆ. ತುರ್ತು ಪರಿಸ್ಥಿತಿ ಎದುರಾಗಿದ್ದು, ಮನೆಯಲ್ಲಿ ಇದ್ದು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here