ಮಾಂಸ ನೇತಾಕಿ ಮಾರಾಟ ಮಾಡಿದರೆ ಕ್ರಮ: ತಹಸೀಲ್ದಾರ

0
88

ಚಿಂಚೋಳಿ: ಸಾರ್ವಜನಿಕರ ಹಿತದೃಷಿಯಿಂದ ಇಂದಿನಿಂದ ನಿತ್ಯ ಬೆಳಿಗ್ಗೆ ೭ರಿಂದ ರಾತ್ರಿ ೭ ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಜತೆಗೆ ತರಕಾರಿ, ಹಣ್ಣು-ಹಂಪಲ ಹಾಗೂ ಮಾಂಸ ಮಾರಾಟ ಮಾಡಲು ಬೆಳಿಗ್ಗೆ ೭ರಿಂದ ೧೧ಗಂಟೆಯ ವರೆಗೆ ರಿಯಾತಿ ನೀಡಲಾಗಿದೆ. ಮಾಂಸ ಮಾರಾಟಗಾರರು ಮಾಂಸ ನೇತಾಕಿ ಮಾರಾಟ ಮಾಡುವವರಿಗೆ ಮುಲಾಜು ಇಲ್ಲದೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ ಅರುಣಕುಮಾರ ಕುಲಕರ್ಣಿ ಖಡಕ್ ಸೂಚನೆ ನೀಡಿದರು.

ಇಲ್ಲಿಯ ತಹಸೀಲ್ ಆವರಣದಲ್ಲಿ ಶುಕ್ರವಾರ ಚಿಂಚೋಳಿ ಪಟ್ಟಣದ ವರ್ತಕರ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು, ನಿಮ್ಮಲ್ಲಿ ಬರುವ ಗ್ರಾಹಕರಿಗಾಗಿ ತಮ್ಮ ತಮ್ಮ ಅಂಗಡಿಗಳ ಮುಂದುಗಡೆ ಅಂತರ ಕಾಯ್ದುಕೊಳ್ಳಲು ಸುಮಾರು ೩ ಮೀಟರ್ ಅಂತರ ಮಾರ್ಕ ಮಾಡಬೇಕು ಮತ್ತು ಕೈತೊಳೆಯಲು ನೀರು, ಸಾಬೂನು ಅಥವಾ ಸೆನಿಟೆಜರ್ ಕಡ್ಡಾಯವಾಗಿ ಇಡಬೇಕು ಜತೆಗೆ ತಾವುಗಳು ಮಾಸ್ಕ್ ಹಾಕಿಕೊಂಡು ವ್ಯವಹಾರ ಮಾಡಬೇಕು ಗ್ರಾಹಕರಿಗೂ ಮಾಸ್ಕ್ ಧರಿಸಲು ತಿಳಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ತಾಲೂಕಾ ಆರೋಗ್ಯ ಅಧಿಕಾರಿ ದೀಪಕ ಪಾಟೀಲ ಮಾತನಾಡಿ, ತಾವು ತಮ್ಮ ಮನೆಗಳಲ್ಲೂ ತಮ್ಮ ಮನೆ ಸದಸ್ಯರುಗಳ ನಡುವೆ ಕನಿಷ್ಠ ೩ ಮೀಟರ್ ದೂರ ಅಂತರ ಕಾಯದುಕೊಳ್ಳಬೇಕು. ತಮ್ಮ ಅಕ್ಕ-ಪಕ್ಕದ ಮನೆಯವರಲ್ಲಿ ಯಾರಾದರೂ ಹೊರ ದೇಶದಿಂದ ಅಥವಾ ಬೇರೆ ಜಿಲ್ಲೆಯಿಂದ ಬಂದಲ್ಲಿ ಕೂಡಲೆ ತಹಸೀಲ್ 08475-273017 ಅಥವಾ 9741970999 ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಿಪಿಐ ಎಚ್ ಎಂ ಇಂಗಳೇಶ್ವರ ಮಾತನಾಡಿ, ಸಾರ್ವಜನಿಕರು ತೊಂದರೆ ಅನುಭವಿಸಬಾರದೆಂದು ಸರಕಾರ ನಿಮಗೆ ದಿನುಸು, ಹಣ್ಣು-ಹಂಪಲ ಖರೀದಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಸಾರ್ವಜನಿಕರು ಈ ಅವಕಾಶ ದುರುಪಯೋಗ ಮಾಡಿಕೊಂಡು ಅನಗತ್ಯವಾಗಿ ರಸ್ತೆಗಿಳಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕೋರೋನಾ ವೈರಸ್ ತಡೆಗಟ್ಟಲು ಸರಕಾರ ಹರಸಾಹಸ ಮಾಡುತ್ತಿದೆ. ಆ ಕಾರಣಕ್ಕಾಗಿ ಎಪ್ರಿಲ್ ೧೪ ರವರೆಗೆ ಜನರಿಗೆ ಮನೆಯಲ್ಲಿಯೇ ಇರಲು ಮನವಿ ಮಾಡಲಾಗಿದ್ದು, ಮಂದಿರ, ಮಸೀದಿ, ಚರ್ಚ ಬಂದ್ ಮಾಡಲಾಗಿದೆ. ಕಾನೂನು ಮೀರಿ ಯಾರಾದರೂ ದೇವಸ್ಥಾನ, ನಮಾಜ ಮಾಡಲು ಹೋದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here