ಸುರಪುರ: ನಗರದ ಪೊಲೀಸ್ ಠಾಣೆ ಹತ್ತಿರದ ಪೆಟ್ರೋಲ್ ಬಂಕ್ ಹಿಂಬಾಗದ ಜಾಲಿ ಪೊದೆಯಲ್ಲಿ ಕಳೆದ ೧೩ನೇ ತಾರೀಖು ಸಂಜೆ ನಡೆದಿದ್ದ ಮಹಿಳೆಯ ಬರ್ಬರ ಕೊಲೆಯನ್ನು ಭೇದಿಸಿರುವ ಪೊಲೀಸರು ಕೊಲೆಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಡೀ ನಗರವನ್ನೆ ಬೆಚ್ಚಿ ಬೀಳಿಸಿದ್ದ ಮಹಿಳೆಯ ಕೊಲೆಯ ಪ್ರಕರಣ ಭೇದಿಸಿದ ನಗರದ ಪೊಲೀಸರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಹಾಪುರ ತಾಲೂಕಿನ ಹಯ್ಯಾಳ (ಕೆ) ಗ್ರಾಮದ ಮಹಿಳೆ ಲಕ್ಷ್ಮಿ ದೇವಿಂದ್ರಪ್ಪ ಬನ್ನಿಕಟ್ಟಿ (೩೮) ಎಂಬುವವಳನ್ನು ಅದೇ ಗ್ರಾಮದ ದೇವಪ್ಪ ಭಿಮಪ್ಪ ಮೇಲಗಿರಿ (೨೮ ವರ್ಷ) ಈತನು ಲಕ್ಷೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು, ಕೆಲ ವರ್ಷಗಳಿಂದ ಇವರಿಬ್ಬರ ಮದ್ಯೆ ಅನೈತಿಕ ಸಂಬಂಧವಿದ್ದು ದೇವಪ್ಪನು ಈಗ ಮದುವೆಯಾಗಲು ಬೇರೆ ಕಡೆಗೆ ಹುಡುಗಿಯನ್ನು ನೋಡಿದ್ದನ್ನು ಇದನ್ನು ವಿರೋಧಿಸಿದ ಲಕ್ಷ್ಮಿಯು ಬೇರೆಯವಳೊಂದಿಗೆ ಮದುವೆಯಾಗಲು ಬಿಡುವುದಿಲ್ಲವೆಂದು ಗಲಾಟೆ ಮಾಡಿದ್ದಳು, ಇದರಿಂದ ಬೇಸರಗೊಂಡಿದ್ದ ದೇವಪ್ಪ ಲಕ್ಷ್ಮೀಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕಳೆದ ೧೩ನೇ ತಾರೀಖು ಸಂಜೆ ಹಯ್ಯಾಳ ದಿಂದ ಸುರಪುರಕ್ಕೆ ಕೊಲೆಯಾದ ಯುವತಿಯನ್ನು ಕರೆದುಕೊಂಡು ಬಂದು ಅಂದು ಸಂಜೆ ನಗರಸಭೆ ಬಳಿಯ ಪೆಟ್ರೋಲ್ ಬಂಕ್ ಹಿಂಬಾಗದ ಸರ್ಕಾರಿ ಜಾಲಿ ಪೊದೆಯಲ್ಲಿ ಕರೆದೊಯ್ದು ಲಕ್ಷ್ಮಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನ್ನು.
ಈ ಘಟನೆ ಇಡೀ ನಗರವನ್ನು ಬೆಚ್ಚಿ ಬೀಳಿಸಿತ್ತು.ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಲು ಯಾದಗಿರಿ ಪೊಲೀಸ್ ಅಧೀಕ್ಷಕ ರುಷಿಕೇಶ ಭಗವಾನ ಸೋನೆವಾಣೆ ಹಾಗು ಸುರಪುರ ಉಪ-ವಿಭಾದ ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿಯವರ ಮಾರ್ಗದರ್ಶನದಲ್ಲಿ ಆರಕ್ಷಕ ನಿರೀಕ್ಷಕ ಸಾಹೇಬಗೌಡ ಎಮ್.ಪಾಟೀಲ ಅವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ಶರಣಪ್ಪ ಹಾಗು ಚೇತನ್ ಮತ್ತು ಹೆಚ್‌ಸಿ ಗಳಾದ ಗಣೇಶ, ಗಜೇಂದ್ರ, ಶಿವಪ್ಪ, ಮಂಜುನಾಥ, ಮನೋಹರ ಹಾಗು ಪಿಸಿಗಳಾದ ಸುಭಾಶ,ಮಹಾಂತೇಶ ಎಪಿಸಿ ಇವರನ್ನೊಳಗೊಂಡ ತಂಡ ರಚನೆ ಸತತ ಹದಿನೈದು ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.