ಕಲಬುರಗಿ: ಕೊರೋನಾ ವೈರಸ್ ತಡೆಗಟ್ಟುವಿಗಾಗಿ ಚಿಕಿತ್ಸೆಗೆ ಬೇಕಾದ ಮೂಲಭೂತ ಸೌಕರ್ಯ ವ್ಯವಸ್ಥೆಗೆ ಕೊರತೆ ಮತ್ತು ಸರಕಾರದ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಖಂಡನಿಯ, ಜಿಲ್ಲಾ ಉಸ್ತುವಾರಿ ಮಂತ್ರಿ ಎಚ್ಚೆತುಗೊಂಡು ಬದ್ಧತೆ ಪ್ರದರ್ಶಿಸಬೇಕು ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾಮಾರಿ ಕೊರೋನಾಗೆ ಮೊದಲ ಬಲಿ ಕಲಬುರಗಿಯಲ್ಲಿ ಜಗ್ಜಾಹಿರವಾದ ವಿಷಯ, ಸೋಂಕು ತಡೆಗೆ ಇಡೀ ದೇಶಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿ ಜಾಗ್ರತಿ ಮೂಡಿಸಿದೆ. ಕೊರೊನಾದಂತಹ ಮಹಾಮಾರಿ ವೈರಸ್ ಹೊಡೆದೋಡಿಸಲು ಯುದ್ದದಂಥ ವಾತವರ್ಣ ನಿರ್ಮಾಣವಾಗಿದ್ದರೂ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವ ಸಚಿವರು ಠಿಕಾಣಿ ಹಾಕದೆ ಮಲತಾಯಿ ಧೋರಣೆ ತೊರುತ್ತಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಂತ್ರಿ ಸ್ಥಾನದಿಂದ ವಂಚಿತವಾದ ಕಲಬುರಗಿ ಜಿಲ್ಲೆ, ಅಷ್ಟೇ ಅಲ್ಲದೆ ರಾಜ್ಯ ಮಂತ್ರಿಮಂಡದಲ್ಲಿ ಕಲ್ಯಾಣ ಕರ್ನಾಟಕದ ರಾಯಚೂರ, ಯಾದಗಿರಿ, ಕೊಪ್ಪಳ ಜಿಲ್ಲೆಗಳಿಗೂ ಸಚಿವ ಸ್ಥಾನದಿಂದ ವಂಚಿತರಾಗಿದ್ದೇವೆ. ಇಷ್ಟಾದರೂ ಸಹನೆಯಿಂದ ಇರುವ ನಮಗೆ ಪ್ರಸ್ತುತ ಕೊರೋನಾದಂತಹ ಮಹಾಮಾರಿ ಯುದ್ದದಂಥ ವಾತಾವರಣ ಸಂದರ್ಭದಲ್ಲಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಠಿಕಾಣಿ ಹೂಡಿ ಗಂಭೀರ ಸ್ಥಿತಿಯ ಸಮಸ್ಯೆಗಳ ನಿವಾರಣೆಗೆ ಸಮರೋಪಾದಿಯ ಕ್ರಮಗಳು ಕೈಗೊಳ್ಳದೆ ಇರುವದು ಬೇಸರ ತಂದಿದೆ ಎಂದರು.