ಕಲಬುರಗಿ: ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟಲು ಹಾಗೂ ಜನ ಸಂದಣಿ ನಿಯಂತ್ರಿಸುವ ಉದ್ದೇಶದಿಂದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬುಜಗಜೀವನರಾಮ ಅವರ ೧೧೩ನೇ ಜಯಂತ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸುವುದನ್ನು ರದ್ದುಪಡಿಸಿ, ಜಿಲ್ಲಾಡಳಿತದ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ಡಾ. ಬಾಬುಜಗಜೀವನರಾಮ ಜಯಂತ್ಯೋತ್ಸವ ಸಮಿತಿ ಜಿಲ್ಲಾಧ್ಯಕ್ಷ ರಾಜು ಆರ್. ವಾಡೇಕರ್ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರದೀಪ ಭಾವೆ ಅವರು ಜಂಟಿಯಾಗಿ ತಿಳಿಸಿದ್ದಾರೆ.
ಕಿಲ್ಲರ್ ಕೊರೋನಾ ವೈರಸ್ ನಿಯಂತ್ರಣದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ೨೧ ದಿವಸ ಲಾಕ್‌ಡೌನ್‌ಗೆ ಕರೆ ನೀಡಿದ್ದಾರೆ. ಅದಲ್ಲದೇ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಜಿಲ್ಲೆದಾದ್ಯಂತ ೧೪೪ ಕಲಂ ಜಾರಿ ಮಾಡಿರುವುದರಿಂದ ಯಾವುದೇ ಸಭೆ ಸಮಾರಂಭ ಹಮ್ಮಿಕೊಳ್ಳಬಾರದು ಎಂದು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಮಾದಿಗ ಸಮಾಜದ ಪ್ರಮುಖರೆಲ್ಲರೂ ಸೇರಿ ಸಭೆ ನಡೆಸಿ ಡಾ. ಬಾಬುಜಗಜೀನರಾಮ ಅವರು ಜಯಂತಿ ಕುರಿತು ಬೃಹತ್ ಸಮಾವೇಶದ ದಿನಾಂಕವನ್ನು ನಿಗದಿಪಡಿಸಿ ತಿಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ಯಾಮ ನಾಟಿಕರ್, ಪರಮೇಶ್ವರ ಖಾನಾಪುರ, ಶ್ರೀನಿವಾಸ ರಾಮನಾಳಕರ್, ಸೈಬಣ್ಣ ಗಡೆಸೂರ ಸೇರಿದಂತೆ ಇನ್ನಿತರರಿದ್ದರು.