ಕಲಬುರಗಿ: ಏಪ್ರಿಲ್ 5 ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ದೀಪಗಳನ್ನೆಲ್ಲಾ ಆರಿಸಿ, ಪ್ರತಿ ಭಾರತೀಯರ ಮನೆಯ ಮುಂದೆ, ಬಾಲ್ಕನಿಯಲ್ಲಿ ನಿಂತು ದೀಪ, ಟಾರ್ಚ್, ಮೊಂಬತ್ತಿ ಅಥವಾ ಮೊಬೈಲನ ಫ್ಲಾಶ್ ಲೈಟ್ ಬೆಳಗಿಸಿ ಇಡೀ ದೇಶ ಒಂದೇ ಎಂಬ ಸಂದೇಶ ಸಾರೋಣ ಎಂದು ಬಿಜೆಪಿ ಜಿಲ್ಲೆ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ಕರೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಗೆ ಭಾರತೀಯ ಪ್ರಜೆಗಳಾದ ನಾವುಗಳು ಪ್ರತಿಯೊಬ್ಬರೂ ಕೈಜೋಡಿಸೋಣ. ಆತ್ಮಬಲ ಹೆಚ್ಚಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯದಿರೋಣ ಎಂದು ತಿಳಿಸಿದ್ದಾರೆ.