ಬಿಜೆಪಿಯವರು ಸರಕಾರ ನಡೆಸಲು ಬಿಡುತ್ತಿಲ್ಲ: ಖಂಡ್ರೆ ಆರೋಪ

0
54

ಕಲಬುರಗಿ: ರಾಜ್ಯದಲ್ಲಿ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿರುವ ಪಕ್ಷಗಳ ಸರಕಾರ ಅಸ್ಥಿತ್ವದಲ್ಲಿದ್ದು ಸಮಾಜಿಕ ನ್ಯಾಯಪರಿಕಲ್ಪನೆಯಲ್ಲಿ ಅಭಿವೃದ್ದಿ ಕೆಲಸ ಜಾರಿಗೆ ತರಲಾಗುತ್ತಿದೆ.  ಆದರೆ, ಸುಳ್ಳು ಹೇಳುವುದನ್ನೇ ಮೈಗೂಡಿಸಿಕೊಂಡಿರುವ ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ಸರಕಾರದ ವಿರುದ್ದ ಅಪಪ್ರಚಾರ ಮಾಡುತ್ತಾ ಸರಕಾರ ನಡೆಸಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ಅವರು ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರು ಏನೆಲ್ಲ ಅಡ್ಡಿಪಡಿಸಿದರೂ ಸರಕಾರ  ಸರಕಾರ ಸುಭದ್ರವಾಗಿದ್ದು ತನ್ನ ಅವಧಿ ಮುಗಿಸಲಿದೆ ಎಂದರು.  ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಕಾಂಗ್ರೆಸ ಹಾಗೂ ಜೆಡಿಎಸ್ ರಾಷ್ಟ್ರ ಹಾಗೂ ರಾಜ್ಯ ನಾಯಕರು ರಾಠೋಡ್ ಬೆನ್ನಿಗಿದ್ದೇವೆ. ಮಲ್ಲಿಕಾರ್ಜು‌ನ ಖರ್ಗೆ ಸಾಹೇಬರಂತಹ ರಾಷ್ಟ್ರಮಟ್ಟದ ಮಾರ್ಗದರ್ಶನ ಅವರಿಗಿದೆ. ಹಾಗಾಗಿ ಜನಪರ ಹೋರಾಟಗಾರ ರಾಠೋಡ್ ಗೆಲ್ಲುತ್ತಾರೆ ಜಾಧವ್ ಅವರ ಮಗ ಅವಿನಾಶ್ ಸೋಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರಕಾರ ತನ್ನ ಐದು ವರ್ಷ ಪೂರ್ಣಗೊಳಿಸಿದೆ ಎಂದ ಕಾಶೆಂಪುರ, ಬಿಜೆಪಿಯವರ ಅಪಪ್ರಚಾರ ನಂಬಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು. ಅಭ್ಯರ್ಥಿ ಸುಭಾಷ್ ರಾಠೋಡ್ ತಮಗೆ ಮತ ನೀಡಿ ಎಂದು ಮನವಿ‌ ಮಾಡಿದರು. ನನ್ನ ವಿರೋಧ ದೌರ್ಜನ್ಯ ಮಾಡಿದ ಉಮೇಶ್ ಜಾಧವ ಅವರ ದರ್ಪ ಅಂತ್ಯವಾಗಬೇಕಾದರೇ, ನನ್ನಂತ ಬಡವನನ್ನು ನೀವು ಆಶೀರ್ವದಿಸಬೇಕು ಎಂದರು. ಇದು ರಾಜಕೀಯ ಜೀವನದ ಕೊನೆಯ ಚುನಾವಣೆ ಇದಾಗಲಿದೆ. ಒಂದು ವೇಳೆ ಸೋತರೆ ಎಲ್ಲಾದರೂ ದೂರ ಹೋಗುತೇನೆ. ನಿಮ್ಮ ಮುಂದೆ ಭಿಕ್ಷೆ ಬೇಡುತ್ತಿದ್ದೇನೆ ನನಗೆ ಭಿಕ್ಷೆ ನೀಡಿ ಎಂದು ಬಾವುಕರಾಗಿ ನುಡಿದರು.

ಸಿಎಂ ಹೆಚ್ ಡಿ ಕುಮಾಸ್ವಾಮಿ, ಸಂಸದರಾದ ಹಾಗೂ ಸಂಸತ್ ನಲ್ಲಿ ಕಾಂಗ್ರೆಸ್ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ, ಸಾಕೆ ಶೈಲೇಶ್ ನಾಥ್, ಕೆಪಿಸಿಸಿ ವರ್ಕಿಂಗ್ ಪ್ರೆಸಿಡೆಂಡ್ ಈಶ್ವರ ಖಂಡ್ರೆ, ಗೃಹ ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂಖಾನ್, ಬಂಡೆಪ್ಪ ಕಾಶೆಂಪುರ, ಶಾಸಕರಾದ ನಾರಾಯಣರಾವ್, ಖನಿಜ್ ಫಾತೀಮಾ, ಐವನ್‌ಡಿಸೋಜಾ, ಅಮರೇಗೌಡ ಭಯ್ಯಾಪುರ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಜಗದೇವ ಗುತ್ತೇದಾರ್ ಸೇರಿದಂತೆ ಮತ್ತುತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here