ಲಾಕ್‌ಡೌನ್ ಮುಗಿಯುವರೆಗೆ ಆಹಾರ ವಿತರಣೆ: ಮಲ್ಲು ಮಾಳಿಕೇರಿ

0
32

ಯಾದಗಿರಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಹಾರ ತಲುಪಿಸುವ ಕಾಯಕ ಒಂದರೆಡು ದಿನಕ್ಕೆ ಸೀಮಿತ ಅಲ್ಲ. ಲಾಕ್‌ಡೌನ್ ಅವಧಿ ಮುಗಿಯುವರೆಗೂ ನಿರಂತರವಾಗಿ ಆಗಬೇಕಾದ ಕೆಲಸ. ಅಸಹಾಯಕರು, ನಿರಾಶ್ರಿತರು ಹಾಗೂ ಬಡ ಕೂಲಿಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು,ಎಂದು ಶರಣಗೌಡ ಕಂದಕೂರ ಅಭಿಮಾನಿಗಳ ಸಂಘದ ಯುವ ಮುಖಂಡ ಮಲ್ಲು ಮಾಳಿಕೇರಿ ಹೇಳಿದರು.

ಗುರುಮಿಠಕಲ್ ಪಟ್ಟಣದಲ್ಲಿ ಇಂದು  ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಕೊರೊನಾ ತಂದೊಡ್ಡಿರುವ ಸಂಕ?ದ ಸಮಯದಲ್ಲಿ ಬಡ ಕೂಲಿ ಕಾರ್ಮಿಕರು ಇರುವಲ್ಲಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.ಕಾರ್ಯಕರ್ತರು ಪ್ರತಿ ದಿನ ನಿರ್ಗತಿಕರಿಗೆ ,ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುವದರ ಮೂಲಕ ಅವರ ಹಸಿವನ್ನು ನೀಗಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಜಿ.ತಮ್ಮಣ್ಣ,ಜಿ,ಕೃಷ್ಣರೆಡ್ಡಿ ಪೊಲೀಸ್ ಪಾಟೀಲ್,ನರಸಪ್ಪ ವಕೀಲ,ದೀಪಕ್ ಬೆಳ್ಳಿ,ಶರಣಪ್ಪ ಹೂಗಾರ,ಪಾಪಣ್ಣ ಹೂಗಾರ,ದೀಪಕ್ ಒಡೆಯರ್,ಆಂಜನೇಯ ಕಟ್ಟಿಮನಿ,ಸಾಬು ಹೋರುಂಚಾ,ಬಸವರಾಜ ಮಡಿವಾಳ,ಅಲ್ಲಾವುದ್ದಿನ್ ನೀಲಹಳ್ಳಿ,ಸಾಬು ನೀಲಹಳ್ಳಿ,ಪ್ರಭು ಯಡ್ಡಳ್ಳಿ,ಅನೀಲ್ ಕುಮಾರ,ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here