ತತ್ವದ ಆಧಾರದ ಮೇಲೆ ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ: ಮಲ್ಲಿಕಾರ್ಜುನ ಖರ್ಗೆ

0
36

ಕಲಬುರಗಿ: ತತ್ವದ ಆಧಾರದ ಮೇಲೆ ಸಂವಿಧಾನದ ಆಶಯಗಳ ರಕ್ಷಣೆಗಾಗಿ ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ‌ ಸರಕಾರ ಅಧಿಕಾರಕ್ಕೆ ಬಂದಿದೆ ಹೊರತು ಅಧಿಕಾರದ ಆಸೆಯಿಂದಲ್ಲ. ಹಾಗಾಗಿ ಐದು ವರ್ಷಗಳ ಕಾಲ ನಿಮ್ಮ ಸೇವೆ ಮಾಡಲಿದೆ ಎಂದು ಸಂಸತ್ತಿನಲ್ಲಿ ಕಾಂಗ್ರೇಸ್ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ ಒತ್ತಿ ಹೇಳಿದರು.

ಅವರು ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಚಿಂಚೋಳಿಯ ನೆಲ ಪವಿತ್ರವಾದುದು ಎಂದು ಹೇಳಿಸ ಖರ್ಗೆ ಅವರು ಶಾಸಕನಾಗಿದ್ದ  ಜಾಧವ್ ತಾನು ರಾಜೀನಾಮೆ ಕೊಟ್ಟು ಸಂಸತ್ತಿಗೆ ‌ಸ್ಪರ್ಧಿಸಿ ಈಗ ಮಗನನ್ನು ಉಪಚುನಾವವಣೆಯಲ್ಲಿ ನಿಲ್ಲಿಸಿರುವುದರ ಹಿಂದೆ ಕುತಂತ್ರ ಅಡಗಿದೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಕೇಂದ್ರ ಸರಕಾರ ತನ್ನ ಮಲತಾಯಿ ಧೋರಣೆ ಮುಂದುವರೆಸಿದ್ದು ರಾಜ್ಯಕ್ಕೆ ಅವಶ್ಯಕವಾದ ಅನುದಾನ ಹಾಗೂ ಬರಪರಿಹಾರ ಬಿಡುಗಡೆ ಮಾಡದೇ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ ನಡೆಯುವ ಎಲ್ಲ‌ಚುನಾವಣೆಯಲ್ಲಿ ಮೋದಿ ಹೆಸರೇಳಿಕೊಂಡು ಹೋಗುತ್ತಿದ್ದಾರೆ. ಅಸೆಂಬ್ಲಿ‌ ಚುನಾವಣೆಗು ಮೋದಿಹೆಸರೇಳಿದರೆ ಮೋದಿ ಅವರು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಮೋದಿ ಏನು ಮಾಡಿದ್ದಾರೆ. ತಮ್ಮ ಅಧಿಕಾರದ ವಿಫಲತೆಯನ್ನು‌ ಮರೆಮಾಚಲು ನಮ್ಮ ಪಕ್ಷದ ನಾಯಕರ ಬಗ್ಗೆ ಮನಸಿಗೆ ಬಂದಂತೆ ಮಾಡುತ್ತಿದ್ದಾರೆ  ಮಾತನಾಡುತ್ತಿದ್ದಾರೆ. ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡಿದ್ದೇನೆ ಹೊರತು ಅವರಿಗೆ ಏಕವಚನದಲ್ಲಿ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ವೇದಿಕೆಯ ಮೇಲೆ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಗೃಹ ಸಚಿವರಾದ ಎಂ.ಬಿ.ಪಾಟೀಲ್, ಸಚಿವರಾದ ಬಂಡೆಪ್ಪ ಕಾಶೆಂಪುರ, ಪ್ರಿಯಾಂಕ್ ಖರ್ಗೆ, ಎಂ.ಸಿ.ಮನಗೂಳಿ, ‌ರಹೀಂಖಾನ್, ಈಶ್ವರ ಖಂಡ್ರೆ, ಅಮರೇಗೌಡ ಭಯ್ಯಾಪುರ, ನಾರಾಯಣರಾವ್, ಅಜಯ್ ಸಿಂಗ್,  ಶೈಲೆಂದ್ರನಾಥ್ ಸಾಕೆ,‌ ಶರಣಪ್ರಕಾಶ್ ಪಾಟೀಲ್, ಕೈಲಾಶನಾಥ್ ಪಾಟೀಲ್, ಜಗದೇವ ಗುತ್ತೇದಾರ್‌ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here