ಅಕ್ಕಮಹಾದೇವಿ ಜಯಂತಿ ಮನೆಯಲ್ಲೇ ಆಚರಿಸಿರಿ: ಅನುಭವ ಮಂಟಪ ಅಧ್ಯಕ್ಷ ಡಾ. ಪಟ್ಟದ್ದೇವರು

2
143

ಬಸವಕಲ್ಯಾಣ: ದೇಶದಾದ್ಯಂತ ಕೊರೊನಾ ವೈರಸ್‍ದಿಂದಾಗಿ ಲಾಕ್‍ಡೌನ್ ಆಗಿರುವುದರಿಂದ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ. ಆದ್ದರಿಂದ ಕಲ್ಯಾಣಕರ್ನಾಟಕ ಭಾಗದ ಎಲ್ಲ ಶರಣಬಂಧುಗಳು ಅಕ್ಕಮಹಾದೇವಿ ಜಯಂತಿ ಯನ್ನು ತಮ್ಮ ಮನೆಯಲ್ಲೇ ಮಾಡಬೇಕೆಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ದೇಶದ ಮೊದಲ ಕವಯಿತ್ರಿ ಎಂದೇ ಖ್ಯಾತರಾದ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಅವರು ಬಸವಾದಿ ಶರಣರ ಸಮಕಾಲೀನರಲ್ಲಿ ಒಬ್ಬರು. ಚನ್ನಮಲ್ಲಿಕಾರ್ಜುನ ಅಂಕಿತದಲ್ಲಿ ಇವರ 400 ಕ್ಕೂ ಹೆಚ್ಚಿನ ವಚನಗಳು ದೊರೆತಿವೆ. ಅವರ ಆಧ್ಯಾತ್ಮ ಜೀವನ ಇಡೀ ಸ್ತ್ರೀಕುಲಕ್ಕೆ ಗೌರವ ತರುವ ರೀತಿಯಲ್ಲಿ ಸಾಗಿದ್ದು ಕಾಣುತ್ತೇವೆ. ಅವರ ಜಯಂತಿ ಪ್ರತಿವರ್ಷ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ.

Contact Your\'s Advertisement; 9902492681

ನಾಳೆ ಬೆಳಿಗ್ಗೆ 8:00 ಗಂಟೆಗೆ ಎಲ್ಲರೂ ಲಿಂಗಪೂಜೆ ಮಾಡಿಕೊಂಡು, ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ವಚನ ಪಠಣ ಮಾಡಿ, ತೊಟ್ಟಿಲು ಕಾರ್ಯಕ್ರಮ ಮಾಡುವ ಮೂಲಕ ಸರಳವಾಗಿ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here