ಕಲಬುರಗಿ: ಪ್ರಸ್ತುತ ಸನ್ನಿವೇಶದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ರಕ್ಷಣೆ ಮಾಡಿಕೊಳ್ಳುವುದರ ಮೂಲಕ ಆರೋಗ್ಯಕರ ವಾತಾವರಣವನ್ನು ಸೃಷ್ಟಿ ಮಾಡಬೇಕೆಂದು ಮೌಲಾನಾ ಸೈಯದ್ ಅತ್ತಾರ್ ಇಲ್ಲಿ ಕರೆ ನೀಡಿದರು.
ಅವರು ಅಲ್ಲಮ ಪ್ರಭು ಅರ್ಬನ್ ಮತ್ತು ರೂರಲ್ ಡವಲಪ್‍ಮೆಂಟ್ ವೆಲ್‍ಫೇರ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಅತೀ ಕಡು ಬಡವ ಕುಟುಂಬದ ಸದಸ್ಯರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಾ ವಿಶ್ವದಲ್ಲಿ ಕರೋನಾ ವೈರಸ್‍ನಿಂದ ಸಾರ್ವಜನಿಕ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಇದನ್ನು ತಡೆಗಟ್ಟಲು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ನವರು ಸೂಕ್ತವಾದ ಕ್ರಮವನ್ನು ಕೈಕೊಳ್ಳುವುದರ ಮೂಲಕ ದೇಶ ಹಾಗೂ ರಾಜ್ಯದ ಜನತೆಯ ರಕ್ಷಣೆಗೆ ಬದ್ದರಾಗಿರುವುದು ತುಂಬಾ ಸಂತೋಷದ ಸಂಗತಿ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಯಾಗಬೇಕಾದರೆ ದೇಶದ ಜನತೆ ಮನೆಯಲ್ಲಿ ಕುಳಿತುಕೊಂಡು ಸರ್ಕಾರದ ಜೊತೆ ಕೈ ಜೋಡಿಸಬೇಕು ಹಾಗೂ ಕೊರೋನಾ ವೈರಸ್‍ನ್ನು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ವಾತಾವರಣ ಸಮಾಜದಲ್ಲಿ ಸೃಷ್ಟಿ ಮಾಡಬೇಕೆಂದು ಸಲಹೆ ನೀಡಿದರು.
ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಲಮ ಪ್ರಭು ಟ್ರಸ್ಟ್ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಇದರ ಸದುಪಯೋಗವನ್ನು ಬಡವರು ಬಳಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹುಮನ್ ರೈಟ್ಸ್ ಕಾರ್ಯದರ್ಶಿಯಾದ ಮಹಮ್ಮದ್ ಸಾಬೀರ್ ಅಮರ್ ಮತ್ತು ವಿಜಯ ದಳಪತಿ, ಮೋಗಟಾ ಪಟೇಲ್ ಸೇರಿದಂತೆ ಮುಂತಾ ದವರು ಇದ್ದರು.