ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ಡಾ. ರಮೇಶ್ ಲಂಡನ್ ಕರ್ ಅವರ ನೇತೃತ್ವದಲ್ಲಿ ಕರೋನ ವೈರಸ್ ಬಗ್ಗೆ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಸಿಟಿ ಮಾರ್ಕೆಟ್, ಬ್ರಹ್ಮ ಪುರ, cib ಕಾಲೋನಿ,ಘಾಟಗೆ ಲೇಔಟ್, ಅಶೋಕ್ ನಗರ, msk ಮಿಲ್,ಜೀಲಾನಬಾದ್, ವೆಂಕಟೇಶ ನಗರ,ಗೋದುತಾಯಿ ಕಾಲೋನಿ,ಶಕ್ತಿನಗರ, ರಾಜಾಪುರ, ನೃಪತುಂಗ ಕಾಲೋನಿ ಇತ್ಯಾದಿ ಏರಿಯಾ ಗಳಲ್ಲಿ ಕರೋನ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸೇವಾ ಘಟಕದಿಂದ ದಿನಗೂಲಿ ಕಾರ್ಮಿಕರಿಗೆ ಆಹಾರದ ಪಾಕೇಟ್ ಗಳು ವಿತರಣೆ ಮಾಡಿದರು. ಡಾ.ಶರಣಪ್ಪ ಸೈದಾಪುರ,ಸ.ಪ್ರ ದ ಕಾಲೇಜು ಚಿತ್ತಾಪುರ ಡಾ. ಮಲ್ಲಿಕಾರ್ಜುನ ಶೆಟ್ಟಿ,ಸ.ಪ್ರ.ದ ಕಾಲೇಜು ಮಹಗಾಂವ ಕ್ರಾಸ, ಡಾ.ಮಹಾದೇವ , ಸಂಜೀವ್ ಕುಮಾರ್ ಕಾಂಬೇಳ್ಳ ಇನ್ನಿತರರು ಉಪಸ್ತಿತರಿದ್ದರು.