ಕಲಬುರಗಿ: ನಗರದ ಫಿಲ್ಟರ್ ಬೇಡ್ ರೋಡಿನ ಚನ್ನವೀರ ನಗರ ಬಡವಾಣೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಚಾಹ ಮಾರಾಟ ಮಾಡುತ್ತಿದ್ದವನ್ನು ಸೇರಿ 7 ಮಂದಿ ವಿರುದ್ದ ಪ್ರಕರಣ ದಾಖಲಿಸಿರುವ ಘಟನೆ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚೌಕ್ ಠಾಣೆಯ ಪಿ.ಎಸ್.ಐ ನಿಸಾರ ಅಹ್ಮದ್ ನೇತೃತ್ವದ ತಂಡ ಬಡಾವಣೆಗಳಲ್ಲಿ ಕಲ 144 ನಿಯಮ ಹಾಗೂ ಲಾಕ್ ಡೌನ್ ಕಾನೂನು ವ್ಯವಸ್ಥೆಯನ್ನು ಪರಿಶೀಲಿಸುತ್ತಿರುವ ವೇಳೆ ಮೈನೊದ್ದೀನ್, ಪ್ರಸಾದ್, ಶರಣು, ವಿಠಲ್, ಫಯಾಜ್, ಕಾಶಿನಾಥ ಹಾಗೂ ಇಮ್ರಾನ್ ಅಹ್ಮದ್ ಎಂಬ ಆರೋಪಿಗಳು ರಸ್ತೆಯ ಬದಿಯಲ್ಲಿ ಗುಂಪು ಸೇರಿಸಿಕೊಂಡು ಚಹಾ ಮಾರುತ್ತಿದ್ದರು ಎಂದು ತಿಳಿದುಬಂದಿದ್ದು, ಅಲ್ಲದೆ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಉಂಟು ಮಾಡಿದಲ್ಲದೇ ಪೊಲೀಸ್ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.