ಕಲಬುರಗಿ: ಜಿಲ್ಲೆಯಲ್ಲಿ ರೈತರು ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸ್ವತ: ಮಾರಾಟ ಮಾಡಲು ಬಯಸಿದಲ್ಲಿ ಅವರಿಗೆ ಗ್ರೀನ್ ಪಾಸ್ ವಿತರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ ಅವರಿಗೆ ಡಿ.ಸಿ.ಎಂ. ನಿರ್ದೇಶನ ನೀಡಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಮತ್ತು ಕೊರೋನಾ ಸೋಂಕಿನ ಕಾರಣ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಚರ್ಚೆ ನಡೆಸಿದ ಸಭೆಯಲ್ಲಿ ಮಾತನಾಡುತ್ತ, ಕುಗಳು ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ವಿತರಣೆಗೆ ಕ್ರಮ ವಹಿಸಬೇಕು. ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ಮೂರು ತಿಂಗಳ ಕಾಲ ಉಚಿತ ಸಿಲೆಂಡರ್ ನೀಡಲು ಆದೇಶಿಸಿದ್ದು, ಅದರಂತೆ ಕ್ರಮ ವಹಿಸುವುದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಲಾಗುತ್ತಿರುವ ಹೆಚ್ಚುವರಿ ಪ್ರೋತ್ಸಾಹದನ ಮೊತ್ತ ರೈತರಿಗೆ ವಿತರಿಸುವುದು ಹಾಗೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಆಶಾ, ಪೌರಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯಗೆ ನೋಂದಣಿ ಮಾಡಿಸಬೇಕು ಎಂದು ಡಿ.ಎಚ್.ಓ. ಡಾ.ಎಂ.ಎ.ಜಬ್ಬಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.
ಬೇಸಿಗೆ ಅರಂಭಗೊಂಡಿರುವುದರಿಂದ ಕುಡಿಯುವ ನೀರಿಗೆ ಈಗಾಗಲೆ ಹಣ ಬಿಡುಗಡೆ ಮಾಡಲಾಗಿದೆ. ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಕೆಲಸ ಅರಂಭಿಸಬೇಕು ಎಂದು ಡಿ.ಸಿ.ಎಂ ಶಾಸಕರಿಗೆ ತಿಳಿಸಿದರು.
ಕಲಬುರಗಿ ನಗರ ಸಂಪೂರ್ಣ ಸ್ಕ್ರೀನಿಂಗ್ ಆಗಲಿ: ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಟೀಲ ರೇವೂರ ಮಾತನಾಡಿ ಕೊರೋನಾ ಸೋಂಕಿನಿಂದ ಕಲಬುರಗಿ ನಗರದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದರಿಂದ ಮತ್ತು ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂಜಾಗ್ರತವಾಗಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣ ಸ್ಕ್ರೀನಿಂಗ್ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸಹಮತಿ ವ್ಯಕ್ತಪಡಿಸಿದ ಗೋವಿಂದ ಕಾರಜೋಳ ಅವರು ಸಂಪೂರ್ಣ ನಗರ ಸ್ಕ್ರೀನಿಂಗ್ ಮಾಡಿಸಲು ಕ್ರಮ ವಹಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಅವರಿಗೆ ಸೂಚನೆ ನೀಡಿದರು.
ತಬ್ಲಿಘಿ ಹೋಗಿ ಬಂದವರು ಮಾಹಿತಿ ಕೊಡಿ, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ: ಕಳೆದ ಮಾರ್ಚ್ ಮಾಹೆಯಲ್ಲಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ತಬ್ಲಿಘಿ ಜಮಾಅತ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದವರು ಹಾಗೂ ಇತ್ತೀಚೆಗೆ ಹೊರದೇಶದಿಂದ ಮರಳಿದವರು ಸ್ವಯಂಪ್ರೇರಿತ ಮಾಹಿತಿ ನೀಡಿ ಕೊರೋನಾ ತಪಾಸಣೆಗೊಳಪಡಬೇಕು. ಇಲ್ಲದಿದ್ದಲ್ಲಿ ಅಂತವರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಡಿ.ಸಿ.ಎಂ. ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.