ಕಲಬುರಗಿ: ಜೀವ ಇದ್ದರೆ ಜೀವನ ಎಂಬ ಪ್ರಧಾನಿ ನರೇಂದ್ರ ಮೋದಿ ಯವರ ಸಂದೇಶದಂತೆ ಎಲ್ಲರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ ಮನೆ ಯಲ್ಲಿಯೆ ಇದ್ದು ಮಹಾಮಾರಿ ಕೊರೋನಾ ವೈರಸ್ ನಿರ್ಮೂಲನೆಗೆ ಪಣತೋಟ್ಟು ಭಾರತ ಮಾತೆಯನ್ನು ಆಪತ್ತಿನಂದ ರಕ್ಷಿಸೋಣ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಇಡೀ ಪ್ರಪಂಚವನ್ನೆ ತಲ್ಲಣಗೋಳಿಸಿರುವ ಕೊರೋನಾ ಸೋಂಕು ತಡೆಗಟ್ಟವ ನಿಟ್ಟಿನಲ್ಲಿ ನಾಗರಿಕ ಬಂಧುಗಳು ತಮ್ಮ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಜಿಲ್ಲಾಡಳಿತದ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸಿ ಸೋಂಕು ಹರಡದಂತೆ ಸಹಕರಿಸಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಬಿಗಿ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡರು ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ.
ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಕೊರೋನಾ ಸೋಂಕು ತೋಲಗಿಸೋಣ. ರಾಜ್ಯಾದ್ಯಂತ ಏಪ್ರಿಲ್ ಅಂತ್ಯದ ವರೆಗೆ ವಿಸ್ತರಿಸಿರುವ ಲಾಕ್ ಡೌನ್ ನನ್ನು ಕಟ್ಟು ನಿಟ್ಟಾಗಿ ಪಾಲಿಸೋಣ. ಆ ಮೂಲಕ ಸಂವಿಧಾನದ ಆಶಯದಂತೆ ಮೂಲಭೂತ ಕರ್ತವ್ಯವನ್ನು ಎತ್ತಿಹಿಡಿಯೋಣ ಹಾಗೂ ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರೋಣ ಎಂದು ಅಂಬಾರಾಯ ಅಷ್ಠಗಿ ಜನತೆಯಲ್ಲಿ ಮನವಿ ಮಾಡಿದ್ದಾರೆ.