ಕಲಬುರಗಿ: ರಾಜ್ಯದಾದ್ಯಂತ ಕೊರೊನ್ ವೈರಸ್ ಭೀತಿ ವ್ಯಾಪಕವಾಗಿರುವ ಸಂದರ್ಭದಲ್ಲಿ ಸರ್ಕಾರದ ಲಾಕ್ ಡೌನ್ ಉಲ್ಲಂಘಿಸಿ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಸಮೀಪ ಇರುವ ರಾವೂರ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ ನಡೆಸಲಾಗಿದೆ.
ಈ ಹಿನ್ನಲೆಯಲ್ಲಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಸುಮಾರು 150 ಜನರ ಮೇಲೆ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಹಾಗೂ ಇವರಲ್ಲಿ ಐದು ಜನರನ್ನು ಸದ್ಯಕ್ಕೆ ಈಗ ಅರೆಸ್ಟ್ ಮಾಡಲಾಗಿದ್ದು ಸ್ಥಳೀಯ ವಾಡಿ ಪೊಲೀಸ್ ಠಾಣೆಯ ಸದ್ಯಕ್ಕೆ ಕೇಸ್ ದಾಖಲಾಗಿದ್ದು, ಜಿಲ್ಲಾ ಆಡಳಿತ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶಕ್ಕೆಗೊಂಡಿದೆ.
ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ರಥೋತ್ಸವದಲ್ಲಿ ಭಾಗಿಯಾಗಿದ್ದರು ಮೇಲೆ ಕಾನೂನಿನಲ್ಲಿ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರಾದ ರಮೇಶ್ ಕೋಲಾರ್ ತಿಳಿಸಿದರು.
ಈ ವೇಳೆಯಲ್ಲಿ ತಸಿಲ್ದಾರಚ್ ಉಮಾಕಾಂತ್ ಹಳ್ಳೆ, ತಾಲೂಕು ಡಿವೈಎಸ್ಪಿ ವೆಂಕನಗೌಡ ಪಾಟೀಲ್, ಪಂಚಾಯತಿ ಇಓ ಅನಿತಾ ಪೂಜಾರಿ, ಪಶುವೈದ್ಯಾಧಿಕಾರಿ ಬಸಲಿಂಗಪ್ಪ ಡಿಗ್ಗಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ರಾಮ ಸೇರಿದಂತೆ ಇತರರು ಇದ್ದರು.
ಜಾತ್ರೆಯಲ್ಲಿ ಪಾಲ್ಗೊಂಡು ಎಲ್ಲರನ್ನೂ ಶೀಘ್ರವಾಗಿ ತಪಾಸಣೆಗೆ ಒಳಪಡಿಸಬೇಕು ಎಲ್ಲರನ್ನೂ ಬಂಧಿಸಿ ಬೇರೆಯಾಗಿಡಬೇಕು ಇಲ್ಲದಿದ್ದರೆ ಎಲ್ಲ ಅಮಾಯಕರ ಬಲಿಯಾಗುವುದು
ಹೈದರಾಬಾದ್ ಕರ್ನಾಟಕ ಅನ್ನೋದನ್ನ ತೆಗೆದು ಕಲ್ಯಾಣ ಕರ್ನಾಟಕ ಅಂತ ಮುಖ ಪುಟದಲ್ಲಿ ನಮೂದಿಸಿ