ಕಾರ್ಮಿಕರ ಖಾತೆಯಿಂದ ಇಎಮ್‍ಐ ಕಡಿತಗೊಳಿಸಿದ ಎಸ್‍ಬಿಐ ಬ್ಯಾಂಕ್

0
43

ಶಹಾಬಾದ: ನಗರದ ಜೆಪಿ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನದಲ್ಲಿ ಶೇ.25 ರಷ್ಟು ಮತ್ತು ಕಾರ್ಮಿಕರು ತೆಗೆದುಕೊಂಡ ಸಾಲದ ಮೇಲಿನ ಕಂತನ್ನು (ಇಎಮ್‍ಐ) ಎಸ್‍ಬಿಐ ಬ್ಯಾಂಕ್ ಕಡಿತಗೊಳಿಸುವ ಮೂಲಕ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಭಾರತೀಯ ಮಜದೂರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾವ ಸಾಳೊಂಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕರೋನಾ ವೈರಸ್ ಹರಡಿದ್ದರಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಲಾಕ್‍ಡೌನ ಮಾಡಿದ್ದು, ಲಾಕ್‍ಡೌನ್‍ನಲ್ಲಿ ಸಂದರ್ಭದಲ್ಲಿ ಕಾರ್ಖಾನೆ ಕಾರ್ಮಿಕರಿಗೆ ವೇತನದಲ್ಲಿ ಯಾವುದೇ ರೀತಿ ಕಡಿತಗೊಳಿಸದೇ, ಸಂಪೂರ್ಣ ವೇತನವನ್ನು ನೀಡಬೇಕು. ಅಲ್ಲದೇ ಬ್ಯಾಂಕ್‍ಗಳಲ್ಲಿ ತೆಗೆದುಕೊಂಡ ಸಾಲಕ್ಕೆ ಮೂರು ತಿಂಗಳು ಸಾಲದ ಮೇಲಿನ ಕಂತನ್ನು ಕಡಿತಗೊಳಿಸಬಾರದೆಂದು ಈಗಾಗಲೇ ಕೇಂದ್ರ ಸರಕಾರ ಈ ಕುರಿತು ಆರ್‍ಬಿಐಗೂ ಸ್ಪಷ್ಟ ನಿರ್ಧೇಶನ ನೀಡಿದೆ.

Contact Your\'s Advertisement; 9902492681

ಆದರೆ ಜೆಪಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಗೆ ಆಡಳಿತ ಮಂಡಳಿ, ವೇಜ್ ಬೋರ್ಡ ನಿಯಮ ಗಾಳಿಗ ತೂರಿ, ಅತ್ಯಂತ ಕಡಿಮೆ ವೇತನ ನೀಡುತ್ತಿದೆ. ಈಗ ಲಾಕ್ ಡೌನ್ ಸಂದರ್ಭದಲ್ಲಿ ಕೊಡುವ ಕಡಿಮೆ ವೇತನದಲ್ಲಿ ಶೇ. 25 ರಷ್ಟು ಕಡಿತಗೊಳಿಸುತ್ತಿದ್ದು, ಆಡಳಿತ ಮಂಡಳಿಗೆ ಈ ಬಗ್ಗೆ ಪ್ರಶ್ನಿಸಿದರೆ, ಕಾರ್ಖಾನೆ ಹಣಕಾಸಿನ ಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದು ಹೇಳುತ್ತಿದ್ದಾರೆ.

ಒಟ್ಟು ಕಾರ್ಮಿಕರಲ್ಲಿ ಸುಮಾರು 70-80 ಜನ ಕಾರ್ಮಿಕರು ಎಸ್‍ಬಿಐ ಬ್ಯಾಂಕ್‍ನಿಂದ ಸಾಲ ಪಡೆದಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಯಾವುದೆ ಸಾಲದ ಮೇಲಿನ ಕಂತನ್ನು ತುಂಬಿಸಿಕೊಳ್ಳದಿರಲು ನಿರ್ಧೇಶನ ಇದ್ದು, ಬ್ಯಾಂಕ್ ಕಾರ್ಮಿಕರ ಸಾಲದ ಕಂತನ್ನು ವೇತನದಿಂದ ಮುರಿದುಕೊಂಡಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಕೇಳಿದಾಗ ಆರ್‍ಬಿಐ ನಿರ್ದೇಶನವಿದ್ದರು, ನಮಗೆ ನಮ್ಮ ಬ್ಯಾಂಕ್ ಕೇಂದ್ರ ಕಚೇರಿಯಿಂದ ನಿರ್ಧೇಶನ ಬರಬೇಕು ಎಂದು ಹೇಳಿದ್ದಾರೆ.ಇದರಿಂದ ಕಾರ್ಮಿಕ ವರ್ಗದವರಿಗೆ ಸಂಕಷ್ಟದಲ್ಲಿ ನೂಕಿದಂತಾಗಿದೆ.

ಈಗಾಗಲೇ ಅತ್ಯಂತ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಾರ್ಖಾನೆ ಮತ್ತು ಬ್ಯಾಂಕ್ ಸಾಲದ ಕಂತು ಕಡಿಗೊಳಿಸಿದರೇ ಕೇವಲ 1200 ರೂ.ಯಲ್ಲಿ ಸಂಸಾರ ಹೇಗೆ ನಡೆಸಬೇಕು. ಹೊಟ್ಟೆಗೆ ಏನು ತಿನ್ನಬೇಕು. ಎಂಬ ಚಿಂತೆ ಕಾರ್ಮಿಕ ವರ್ಗದವರಲ್ಲಿ ಕಾಡುತ್ತಿದೆ. ಕೂಡಲೇ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಕಾರ್ಮಿಕ ಇಲಾಖೆ ಇತ್ತ ದೃಷ್ಠಿ ಹಾಯಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here