ಸರ್ಕಾರದ ನಿಯಮದಂತೆ ಗೃಹಬಂಧನದಲ್ಲಿ ಇದು ವಿಶ್ವದಲ್ಲೆಡೆ ಎದ್ದಿರುವ ಈ ವೈರಾಣುವಿನ ಕೋಲಾಹಲದಿಂದಾಗಿ, ವಿಸ್ಮಯಗೊಂಡ ಈ ಲೋಕ ಬದುಕುವುದು ಬದುಕಲ್ಲ ಆರೋಗ್ಯವಾಗಿ ಬದುಕುವುದೇ ಬದುಕು ಎಂಬ ಸತ್ಯ ಅರಿತು ಕೊಳ್ಳುವಂತಾಗಿದೆ.
ಗುಡಿ ಗುಂಡಾರಗಳು ಆಯಾ ಧರ್ಮ, ಧರ್ಮದ ಅನುಯಾಯಿಗಳು ಮೂಲೆಗುಂಪಾಗಿ ತನ್ನ ಕೈಯನ್ನು ತಾನೇ ತೋಳೆದುಕೊಳ್ಳುವಂತಾಗಿದೆ. ಜಗತ್ತಿನಲ್ಲಿ ಎದ್ದಿರುವ ಕೊರೆನ ಮಹಾಮಾರಿಯ ಕೋಲಾಹಲದಿಂದ ಮನಸ್ಸಾಕ್ಷಿ ಗಿಂತ ಮತ್ತೇನು ಸಾಕ್ಷಿ ಮುಖ್ಯವಲ್ಲ ಎಂಬ ಅರಿವು ಮೂಡಿಸಿದೆ.
ಒಬ್ಬ ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ನಕರಾತ್ಮಕ ಧೋರಣೆಯನ್ನು ಕಡಿಮೆ ಮಾಡಿಕೊಂಡು, ಸಕಾರಾತ್ಮವಾಗಿ ವಿಚಾರಿಸುವ ಮನೋಧೈರ್ಯ ತಂದು ಕೊಟ್ಟಂತಾಗಿದೆ, ಇದೇ ವಿಚಾರದ ಮೇರೆಗೆ ಇಂತಹ ಸಮಯದಲ್ಲಿ ಮನೆ ಕೆಲಸದವರ ಮಹತ್ವ ಗೊತ್ತಾಯ್ತು. ಸಮಯದ ಅರಿವು ಮೂಡಿತು, ಕೂಲಿ ಕಾರ್ಮಿಕರ ಕೆಲಸ ಮಾಡುವಂತಹ ಜೀವನದ ಸತ್ಯ ನಮಗೆ ಅರಿವಿಗೆ ಬಂದಿದೆ ಎಂದು ಹೇಳಬಹುದು.
ಈ ಕೊರೊನಾ ವೈರಾಣುವನ್ನೂ ಸಕರಾತ್ಮಕವಾಗಿ ತೆಗೆದುಕೊಂಡಲ್ಲಿ ಇದು ಪ್ರಕೃತಿಯ ಒತ್ತಡ ಕಡಿಮೆ ಮಾಡಿ ಜೊತೆಗೆ ಇಡೀ ಜಗತ್ತಿಗೆ ಪಾಠ ಕಲಿಸಿದೆ, ಅಷ್ಟೇ ಅಲ್ಲದೆ ಮನುಷ್ಯನ ಸ್ವಾರ್ಥ ದುರಾಸೆ ಗೆ ತಿರುಗೇಟು ಕೊಟ್ಟು ಯಾವ ಪ್ರಾಣಿ ಪಕ್ಷಿ ಗೆ ಬರದ ವೈರಾಣು ಮನುಷ್ಯನನ್ನೇ ತಿಂದು ಹಾಕಿ ಚಾಟಿಯೇಟು ನೀಡಿದೆ ಎನ್ನಬಹುದು.
ಜೀವನದಲ್ಲಿ ನಿಜಕ್ಕೂ ಮನುಷ್ಯನಿಗೆ ಅಗತ್ಯ ಇರುವುದು ಏನು ಮತ್ತು ಯಾಕೆ? ಎನ್ನುವ ಪ್ರಶ್ನೆ ಅರಿತಂತೆ ಆಗಿದೆ. ಇವತ್ತು ಹಣ ಆಸ್ತಿ ಪ್ರಯೋಜನ ಇಲ್ಲ ಎನ್ನುವ ಸತ್ಯ ಗೊತ್ತಾಯ್ತು. ಮನೆ ಜವಾಬ್ದಾರಿ ಹೆಚ್ಚಿದೆ. ಮಕ್ಕಳ ಒಡನಾಟದಲ್ಲಿ ದಿನ ಬೆಳಿಗ್ಗೆ ಸಂಜೆ ಯಾವುದು ಅರಿವಿಗೆ ಬಾರದೆ ಎಲ್ಲೋ ಒಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಇರುವಂತಹ ಸಮಾಚಾರಗಳನ್ನು ನೋಡಿ ಮನಸ್ಸು ತಲ್ಲಣ ಗೊಳ್ಳುತ್ತಿದೆ ಆದರೂ ಸಹಿತ ಕುಟುಂಬದವರೊಡನೆ ಮಕ್ಕಳ ಜೊತೆ ಒಡನಾಟ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಆಸ್ಪದ ಮಾಡಿಕೊಟ್ಟಿದೆ ಎನ್ನಬಹುದು. ನಿಜದಲ್ಲಿ ಇದರಿಂದ ಪಾಠ ಕಲಿತಿದ್ದು ಪ್ರತಿಯೊಬ್ಬ ಮನುಷ್ಯ ನಾನೇ ಎಂಬ ಅಹಂಕಾರ ಇಳಿದು ಮನುಷ್ಯ ಜನ್ಮ ಬಗ್ಗು ಬಡಿದಂತಾಗಿದೆ. ಜೊತೆಗೆ ನಮಗೆ ಗಿಡಮರ ನೆಡಬೇಕು ಪ್ರಕೃತಿಯನ್ನು ಕಾಪಾಡಬೇಕು ನೀರಿನ ಮಹತ್ವ ಗೊತ್ತಾಗಿದೆ , ಒಟ್ಟಾರೆ ಜೀವನದಲ್ಲಿ ನಾವು ಹೇಗೆ ಬದುಕಬೇಕು ಎಂಬ ಅರಿವು ಮೂಡಿಸಿದೆ.
ಶುದ್ಧವಾಗಿ ಶುಭ್ರವಾಗಿ ಅಂತರಂಗ-ಬಹಿರಂಗ ಎರಡು ಹೇಗೆ ಇಟ್ಟುಕೊಳ್ಳಬೇಕು ಎಂಬ ದೊಡ್ಡ ಪಾಠ ಜೊತೆಗೆ ಮಾನವೀಯ ಮೌಲ್ಯಗಳು ತಿಳಿಯುವಂತಾಗಿದೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ.
ವಿಶ್ವಗುರು ಬಸವಣ್ಣನವರ ಈ ವಚನದ ಸಾರಾಂಶ ನಿಜದಲ್ಲಿ ಇವತ್ತು ಇಡೀ ಜಗತ್ತಿಗೆ ಅರಿತಂತಿದೆ.