ಬೈ ಬೈ ಕೊರೊನಾ, ಗೋ ಕೊರೊನಾ

0
213

ಮನೆಯಲ್ಲಿ ಇರುವುದು, ಮನೆಯಿಂದ ಹೊರಗೆ ಬರಬಾರದು ಎಂದು ಹೇಳುವುದು ಇದು ಇಡೀ ದೇಶ, ರಾಜ್ಯ, ಜಿಲ್ಲೆ, ಮನೆ ಮನಗಳಿಗೆ ಕಡ್ಡಾಯವಾಗಿದೆ. ಆದರೆ 23 ದಿನದಲ್ಲಿ ನಾನು ಏಳು ದಿನಗಳು ಮನೆಯ ಗೇಟ್ ಬಳಿ ಬಂದಿರಲಿಲ್ಲ.

ನಂತರ ಹಾಲು, ತರಕಾರಿ, ಕಿರಾಣಿ ಅಂದುಕೊಂಡು ಹೊರಗೆ ಬಂದೆ. ಆದರೆ ಎಲ್ಲರ ಮುಖದಲ್ಲಿ ಮಾಸ್ಕ್ ಗಳು, ಇಡೀ ನಗರವೇ ಕತ್ತಲೆ, ಜನಜಂಗಳಿ ಪ್ರದೇಶಗಳು ಮೌನ ವಾಗಿತ್ತು. ಎಲ್ಲಿ ನೋಡಿದರೂ ಪೊಲೀಸರು, ಆಂಬುಲೆನ್ಸ್ ಗಳು, ಅಲ್ಲಿ ಇಲ್ಲಿ ಒಂದು ದ್ವಿಚಕ್ರ ವಾಹನ ಸವಾರರು ಮಾತ್ರ ಕಾಣುತ್ತಿದ್ದರು.

Contact Your\'s Advertisement; 9902492681

ನಾನು ಕಲಿತ ಪಾಠವೇನು ಗೊತ್ತಾ ರೀ. ಜೀವನದಲ್ಲಿ ಯಾವುದು ಶಾಶ್ವತವಲ್ಲ. ಇರುವ ಸಮಯವನ್ನು ಎಲ್ಲರ ಜೊತೆಗೆ ನೆಮ್ಮದಿಯಿಂದ ಇರಬೇಕು. ಇಂತಹ ಆಧುನಿಕ ಯುಗದಲ್ಲಿ ಯಾರು ಯಾವಕಾಲಕ್ಕೂ ಮನೆಯಲ್ಲಿ ಇರುವುದಿಲ್ಲ ಎಂದು ಕೊಂಡಿದ್ದೆ.ಆದರೆ ಕೊರೋನಾ ಬಂದು ಅತ್ಯಂತ ಶ್ರೀಮಂತ ಮತ್ತು ಬಡವರು ಮನೆಯಲ್ಲಿ ಇರುವಂತೆ ಮಾಡಿತ್ತು.

ಮನುಷ್ಯನಿಗೆ ತಾಳ್ಮೆ ಮತ್ತು ಸಹನೆ ಬಂತು. ಎಲ್ಲರೂ ನಮ್ಮವರು ಎನ್ನುವ ಭಾವನೆ ಬಂತು ಆದರೆ ಅವರಿಗೆ ಮಾತನಾಡುವ ಮತ್ತು ಭೇಟಿ ಆಗುವುದು ಇಲ್ಲವಾಯಿತ್ತು. ಮನೆಯ ಇಡೀ ಜಗತ್ತಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಒಂದು ಕೇಂದ್ರವಾಯಿತು. ಮನೆಯಲ್ಲಿ ಹಿರಿಯರು, ಮಕ್ಕಳು ಜೊತೆಗೆ ಪ್ರೀತಿಯ ಮಾತುಗಳು, ಹಾಸ್ಯ, ಚರ್ಚೆ, ಊಟ ಚಿಕ್ಕ ಸಮೂಹವಾಗಿ ಕಾಲವೇ ಮಾಡಿಕೊಟ್ಟಿತು ಕೋವಿಡ್-19, 2020 ಆಗಿತ್ತು.

ಈ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಕೆಲಸವಾಯಿತು. ಪುರುಷ ಕೆಲಸ ಕಡಿಮೆಯಾಗಿದೆ. ಆದರೆ ಆರ್ಥಿಕ ಪರಿಸ್ಥಿತಿ ಎದುರಾಗಿದೆ ಹೇಗೆ ನಿಭಾಯಿಸಲು ಯೋಚನೆ ಮಾಡ್ತಾ ಇದ್ದಾನೆ. ಹಿಂದಿನ ಕಾಲದಲ್ಲಿ ಹಿರಿಯರು ಹೇಳುತ್ತೀದ್ದರು, ಜೀವನ ನೀರಮೇಲೆನ ಗುಳಿ ಎಂದು ಈಗ ಅರ್ಥ ಮಾಡಿಕೊಳ್ಳಲು ಕೊರೋನಾ ಕಲಿಕೆವಾಗಿತ್ತು.

ಆದರೆ ನಾವು ಶರಣ ತತ್ವಗಳನ್ನು ಅಳವಡಿಸಿಕೊಂಡರೆ ಸ್ವಲ್ಪ ಸಮಯ ಧೈರ್ಯ ಮತ್ತು ಹೇಗೆ ನಡೆದುಕೊಳ್ಳಬೇಕು ಎನ್ನುವುದು ಇಲ್ಲಿ ಬಹಳಷ್ಟು ಅನುಭವಕ್ಕೆ ಬರುತ್ತದೆ. ಆಸೆ, ವಂಚನೆ, ಮೋಸ, ಇವುಗಳಲ್ಲಿ ಯಾವುದಕ್ಕೂ ಜಾಗವಿಲ್ಲ. ರೈತ ಬೆಳೆದ ತರಕಾರಿ ಮತ್ತು ಕಾಳು ಕಡಿಗಳು ಇವುಗಳನ್ನು ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಜೀವನ ಜೀವಂತವಾಗಿದೆ ಎನ್ನಬಹುದು.

ದಾನ, ಧರ್ಮ, ನೀತಿ, ಅನುಭವ ಮತ್ತು ಅನುಕರಣೆ ಸತ್ಯ ಸಂಗತಿ ಜೊತೆಗೆ ಪ್ರತಿ ಕ್ಷಣ, ಪ್ರತಿ ದಿನ ನಿತ್ಯ ಹೊಸದು ಎನ್ನಬಹುದು. ಕೊರೋನಾ ನೀನು ಈ ಜಗತ್ತಿನಲ್ಲಿ ವಿಜ್ಞಾನಿಗಳಿಗೆ, ವೈದ್ಯರಿಗೆ, ದೇವಾನುದೇವತೆಗಳಿಗೆ, ಜ್ಯೋತಿಷ್ಯಗಳಿಗೆ, ಮೂಡನಂಬಿಕೆಗಳಿಗೆ ಎಲ್ಲದಕ್ಕೂ ಕೊರೋನಾ ಸೋಲಿಸಿದೆ. ಎಲ್ಲರ ಬಾಯಿಯಲ್ಲಿ ಮನದಲ್ಲಿ ಕೋವಿಡ್ 19 ಬಗ್ಗೆ ಚರ್ಚೆ ನಡೆಯುತ್ತಿದೆ. ಹುಟ್ಟಿದ ಕೂಸಿನಿಂದ ಮುದುಕನ ವರೆಗೂ ಎಲ್ಲರೂ ಸಮಾನವಾಗಿ ನೀ ಕಂಡೆ. ಶ್ರೀಮಂತ್ರ ಬಡವರಿಗೆ ನಿನ್ನ ಮುನ್ನ ಎಚ್ಚರಿಕೆ ನೀಡಿದೆ.

ಮನೆಯಲ್ಲಿ ಇದ್ದರು ಒಬ್ಬರನ್ನೊಬ್ಬರು ದೂರವಿಟ್ಟೆ, ಮದುವೆಗಳು ಸರಳವಾಗಿ ಮಾಡುವ ಸೂತ್ರ ಕಲಿಸಿದೆ, ಸತ್ತರು ಸಂಬಂಧಪಟ್ಟರು ಮಾತ್ರ ಇಟ್ಟೆ, ಕೊರೋನಾ ಬಂದು ಸತ್ತರು ಯಾರಿಗೆ ಯಾರು ಇಲ್ಲದಂತೆ ಮಣ್ಣು ಮಾಡುವುದನ್ನು ನೋಡಿದರೆ ದುಃಖವಾಗುತ್ತದೆ. ಇಡೀ ಜಗತ್ತಿಗೆ ಕೊರೋನಾ ಸವಾಲು ಆದೆ. ಆದರೆ ಮನುಷ್ಯ ಮನುಷ್ಯನಿಗೆ ಭೇಟಿ ಮಾಡದ ಹಾಗೆ ಮಾಡಿದು  ಇತಿಹಾಸದಲ್ಲಿ ಕೋವಿಡ್-19 ಒಂದೇ ಅನ್ನಬಹುದು…

ಎಲ್ಲರೂ ಮನೆಯಲ್ಲಿ ಇರೀ, ಕೊರೋನಾ ತೊಲಗಿಸಿ, ಕೋವಿಡ್ -19 ನೀನು ಬೇಗನೇ ಹೋಗು, ಮಕ್ಕಳು ಪರೀಕ್ಷೆ ಬರೆಯಬೇಕು, ಬಡವರು, ಕೂಲಿ ಕಾರ್ಮಿಕರ ದುಡಿಯಬೇಕು, ನೌಕರರು ಕೆಲಸ ಮಾಡಬೇಕು ಸಾರ್ವಜನಿಕರು ಭೇಟಿ ಆಗಬೇಕು, ರೈತರು ಕೆಲಸ ಮಾಡಬೇಕು, ಕೊರೋನಾ ನೀನು ಬೇಗನೇ ಜನರಿಂದ ಬಲು ದೂರ ಪ್ರಯಾಣ ಮಾಡು, ಮನುಷ್ಯರಿಂದ ದೂರಹೋಗಬೇಕು. ಎಲ್ಲರ ಆರೋಗ್ಯವೇ ಭಾಗ್ಯವಾಗಬೇಕು. By, by, ಕೊರೋನಾ…

-ಬಿ.ಎಂ.ಪಾಟೀಲ ಕಲ್ಲೂರ, ಕಲಬುರಗಿ.
ಮೊ: 9845268676

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here