ಕೆಲಸ ಇಲ್ಲದ ಕೈಯಲ್ಲಿ ಕಾಸು ಎಲ್ಲಿಂದ ಬರಬೇಕು, ಬಿಲ್ ಕಟ್ಟಲು ಸಮಯ ಕೊಡಿ: ಅಂಡಗಿ

0
169

ಕಲಬುರಗಿ: ಕೆಲಸ ಇಲ್ಲದೆ ಮನೆಯಲ್ಲಿ ಇದ್ದಿದೇ ಸುಟ್ಟ ಗಾಯದಂತ್ತಿರುವ ಈ ಪರಿಸ್ಥಿತಿ ಯಲ್ಲಿ ದುಡ್ಡು ಕಟ್ಟಲು ಒತ್ತಡ ಹಾಕುವುದು ಕೇಳಿದರೆ ಜನಸಾಮಾನ್ಯರಿಗೆ ಅಥವಾ ಗ್ರಾಹಕರಿಗೆ ಸುಟ್ಟ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿದ್ದು, ಗ್ರಾಹಕರಿಗೆ ಬಿಲ್ಲು ಪಾವತಿಗಾಗಿ ಸಮಯದ ಮತ್ತು ರಿಯಾಯಿತಿ ನೀಡಬೇಕೆಂದು ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ತಿನ ಮಾಜಿ ಸದಸ್ಯ ಶಿವರಾಜ ಅಂಡಗಿ ಆಗ್ರಹಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಲಾಕ್ ಡೌನ್ ಪ್ರಯುಕ್ತ ಜನರು ಹೊರಗಡೆ ಓಡಾಡಬಾರದು ಎಂಬ ಕಾರಣಕ್ಕಾಗಿ ಸರ್ಕಾರದ ವಿವಿಧ ಇಲಾಖೆಯವರು ಭೀಮಾ ಆ್ಯಪ್, ಪೊನ್ ಪೇ, ಗೂಗಲ್ ಆ್ಯಪ್, ಪೇಟಿಯಂ ಮುಲಕ ಆನ್‌ಲೈನ್ ಬಿಲ್ ಕಟ್ಟುವ ಸಲುವಾಗಿ ದಿನ ಪತ್ರಿಕೆ ಯಲ್ಲಿ ಕೇಳುತ್ತಿರುವುದು ಸರಿಯಲ್ಲಿ .

Contact Your\'s Advertisement; 9902492681

ಈಗಾಗಲೆ ಒಂದು ತಿಂಗಳಿನಿಂದ ಕೊರೊನಾ ವ್ಯೆರಸ್ ತಡೆಗಟ್ಟಲು ಲಾಕ್ ಡೌನ್ ಪ್ರಯುಕ್ತ ಜನರು ಹೊರಗಡೆ ಓಡಾಡಬಾರದು ಎಂಬ ಕಾರಣಕ್ಕಾಗಿ ಕೆಲಸ ಬಿಟ್ಟು ಮನೆಯಲ್ಲಿ ಕುಳಿತು ಕೈಯಲ್ಲಿ ಕಾಸಿರದೆ ಪರ್ ಶಾನ್ ಆಗಿರುವಂತ ಪರಿಸ್ಥಿತಿ ಮನಗಂಡು ಸರ್ಕಾರವೇ ಮುಂದಿನ ಮೂರು ತಿಂಗಳ ವರೆಗೆ ಜನಸಾಮಾನ್ಯರು ಯಾವುದೇ ಹಣದ ವಂತಿಕೆಯಾಗಲ್ಲಿ, ಮನೆ ಬಾಡಿಗೆ ಆಗಲಿ, ಕಟ್ಟುವಲ್ಲಿ ರಿಯಾಯಿತಿಗಾಗಿ ನೀಡಿರುವು ಆದೇಶ ಮಾಡಿದ್ದಾರೆಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here