ಕಲಬುರಗಿ: ಜೇವರ್ಗಿ ಪಟ್ಟಣದ ಹೂರವಲಯದ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಾಣ ಹಂತದಲ್ಲಿದ್ದ ಒಳಾಂಗಣದ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ ಇಂದು ನಡೆದಿದೆ.
ಮೃತನನ್ನು ಯಲ್ಲಪ್ಪ ತಂದೆ ನಾಗಪ್ಪ ವಡ್ಡರ (25) ಎಂದು ಗುರುತಿಸಲಾಗಿದೆ.
ಗೊಡೆಯು ಕುಸಿಯುತ್ತಿದ್ದ ಸಪ್ಪಳ ಕೇಳುತ್ತಿದ್ದಂತೆ ಮತ್ತೊಂದು ಭಾಗದಲ್ಲಿದ್ದ ಏಳು ಜನ ಕಟ್ಟಡ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.