ಮನುಕುಲದ ಅತೀ ವೇಗಕ್ಕೆ ತಡೆಯೊಡ್ಡಿದ ಕೊರೊನಾ

0
70

ಕೋವಿಡ್‌-19 ಮನುಕುಲದ ಸರಾಗ ವೇಗಕ್ಕೆ ಬಹುದೊಡ್ಡ ತಡೆಯೊಡ್ಡಿದೆ. ಜಗತ್ತೇ ಸಹಜ ಜೀವನದ ಕನಸು ಕಾಣುತ್ತಿದೆ. ಕೊರೊನಾಗೆ ಮದ್ದರೆದರೂ ಮುರಿದು ಬಿದ್ದ ಆರ್ಥಿಕತೆಯ ಪುನರ್‌ ನಿರ್ಮಾಣ, ಬೀದಿಗೆ ಬಿದ್ದ ಜನರಿಗೆ ಹೊಸ ಬದುಕು ಕಟ್ಟಿಕೊಡುವ ಸವಾಲು ಎದುರಿಸುವುದು ಸುಲಭವಲ್ಲ. ಕೊರೊನಾ ಕಲಿಸಿದ ಪಾಠ ಮರೆತು ಬದುಕಿನ ವೇಗ ಹೆಚ್ಚಿಸಿಕೊಂಡರೆ ಕಾಪಾಡುವ ಕೈಗಳು ಎಲ್ಲಿವೆ?

ಕೋವಿಡ್‌-19 ಕಾರಣಕ್ಕೆ ಪೂರ್ವ ನಿಗದಿಯಾಗಿದ್ದ ನೂರಾರು ಮದುವೆಗಳು, ಆರತಕ್ಷತೆಗಳು, ಶುಭ ಸಮಾರಂಭಗಳಿಗೆ ತೀವ್ರ ಅಡ್ಡಿಯಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸಿ ನಿಗದಿಯಾಗಿದ್ದ ಮದುವೆಗಳು ಕೂಡ ಮುಂದೂಡಲ್ಪಟ್ಟಿವೆ. ಹಬ್ಬ ಹರಿದಿನ, ಜಾತ್ರೆ, ಶುಭ ಸಮಾರಂಭಗಳಿಗೆ ಪ್ರಶಸ್ತವಾಗಿದ್ದ ಕಾಲದಲ್ಲೇ ಅಪ್ಪಳಿಸಿದ ಕೊರೊನಾ ಜನಜೀವನವನ್ನು ಸ್ತಬ್ಧಗೊಳಿಸಿದೆ.

Contact Your\'s Advertisement; 9902492681

ಅಮ್ಮ ಹೇಳುತ್ತಿದ್ದಳು, ಹಿತ್ತಲದ ಮೇಲಿಟ್ಟ ಕಡಲೆ ಹಿಟ್ಟಿನಿಂದ ಕೈಕಾಲು ತೊಳೆದು ಒಳಗೆ ಬಾ ಎಂದು. ಅಪ್ಪ ನೆನಪಿಸುತ್ತಿದ್ದ ಉಪ್ಪಿನ ಜತೆಗೆ ಇದ್ದಿಲು ಕಡಿದು ಹಲ್ಲುಜ್ಜಿ, ಹಾಲು ಕುಡಿ ಎಂದು. ಗದ್ದೆ, ಹೊಲಗಳಲ್ಲಿ ಕೆಲಸ ಮಾಡಿ ವಾಪಸು ಮನೆಗೆ ಬಂದಾಗ ಸ್ವಚ್ಛತೆಗೆ ನೀಡುತ್ತಿದ್ದ ಮಹತ್ವ, ಮನಗೆ ಹೇಳುತ್ತಿದ್ದ ಬುದ್ಧಿ ಮಾತುಗಳು ಈಗಲೂ ಕಣ್ಣಲ್ಲಿ ಕಟ್ಟಿದಂತಿವೆ.

ರವೀಂದ್ರಕುಮಾರ ಭಂಟನಳ್ಳಿ, ಕಲಬುರಗಿ
ಮೊ: 9880219093

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here