ಆಧುನಿಕ ಕೊರೋನ

3
232

ಈಚಲ ಆಚಲ ದೇಹ ಸೇರಿದ ಮೇಲೆ ಆಯಿತು ಮಜ್ಜಲ!!
ಆತಾಳ ಪಾತಾಳ ಕಲಿಯುಗಳ ಕಂಡಿರಿಯದ ಕಂಗಳು,
ಕೇಳರಿಯದ ಕರಣಗಳು, ಕಂಗೆಡಿಸಿತು ಮನೆ ಮನಗಳ
ಬೇರ್ಪಡಿಸಿತು ,ಜಗತ್ತಿನ ಚರಾಚರಗಳ.

ಕೋರೋ ಜಾಲ ಬೀಸಿತು. ಬಲ್ಲಿರಾ ನೀವು ಬಲ್ಲಿರಾ!!
ಭರವಸೆಯ ಕೈಗಳಿಗೆ ರಕ್ತದ ಹನಿಗಳಿಗೆ ಹೆಪ್ಪು ಗಟ್ಟಿತು ಕಾರ್ಮೊಡ ನೇಗಿಲಯೋಗಿ ಬಸವಳಿದೋಗಿ
ತುತ್ತು ಅನ್ನಕ್ಕಾಗಿ, ಬೊಗಸೆ ನೀರಿಗಾಗಿ ಅಲೆದಾಡುವ ಸವಾರಿಗಳು ನಾವು
ಹಾದಿ ಬೀದಿಯ ಬದಿಗಳಲ್ಲಿ, ನಿರಾಶ್ರಿತರ ತಾಣಗಳಲ್ಲಿ, ಕಂಕುಳಲ್ಲಿ ಕಂದಮ್ಮಗಳ ಆಕ್ರಂದನ,
ಹಾತೊರೆದು ಅಂಗಲಾಚಿ
ತುತ್ತು ಅನ್ನಕ್ಕಾಗಿ ಬೇಡಿಕೊಂಡೆವು ಕೈಚಾಚಿ.

Contact Your\'s Advertisement; 9902492681

ಓರಾಮ ! ರಹೀಮ! ಕರಿಮ- ಕೇಶವ ಕೇಳು ನೀನು,
ಪ್ರಾಣಿ ಪಕ್ಷಿ ಸಂಕುಲಗಳ ಮೂಕಸ್ಮಿತ ರೋದನ !!
ಕಾಳ್ಗಿಚ್ಚಿನಂತೆ ಹಬ್ಬತ್ತಿದೆ.

ಓ ಕೋರೋನ ಓ ಕೋರೋ ಓ ಕೋರೋ ಮಾಡ್ಯಾದ ನಮ್ಮೆಲ್ಲರಿಗೂ ಹೈರಾಣ!
ಈಗಾದರೂ ತಿಳಿಯೋಣ, ಮನೆ ಬಿಟ್ಟು ಹೊರಗಡೆ
ಬರೋದು ಬಿಡೋಣ. ಉಳಿಸೋಣ ನನ್ನ ಪ್ರಾಣ ,ನಮ್ಮವರ ಪ್ರಾಣ.
ಅಂತರ ಕಾಪಾಡೋಣ ಕ್ಷಣ ಕ್ಷಣ ,ಆಗುವುದು ಬೇಡ ಹೈರಾಣ .
ಮಾಡೋಣ ನಾವೆಲ್ಲರು ಪ್ರಮಾಣ.

ಕೋರೋಕೆ ಅಂತ್ಯ ಹಾಡೋಣ ಕೋರೋನ ಅಂತ್ಯಕ್ಕೆ ಹಾಡೋಣ ಮುಕ್ತಿ ಸಿಗಲಣ್ಣ!!
ಇನ್ನಾದರೂ ಮನೆಯಲ್ಲಿರೋಣ ಇನ್ನಾದರೂ ಮನೆಯಲ್ಲಿರೋಣ
ಫ್ರೀತಿ ವಾತ್ಷಲ್ಯ ಮಮಕಾರ ಸಂಭಂಧಗಳನ್ನು ಅಮರಗೊಳಿಸೋಣ
ಓ ಮೊಬೈಲ್ ಕರೋನ ನಿನಗೂ ಸಹ ದೂರ ಇರಿಸೋಣ!!
ನಾವೆಲ್ಲರು ಈ ಯುದ್ಧಕ್ಕೆ, ಜೈ ಗೋಷ ಹಾಕೋಣ.
ಜೈ ಹಿಂದ್. ಜೈ ಹಿಂದ್. ಜೈ ಹಿಂದ್.

ರಚನೆ: ಹೆಚ್.ಬಿ.ಚೌಧರಿ, ಜಿಲ್ಲಾ ಸಮಾದೇಷ್ಟರು
ಗೃಹರಕ್ಷಕದಳ

3 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here