ಕೊರೊನಾ ಕಲಿಸಿದ ಪಾಠ: ಟ್ರೈನ್ ಜರ್ನಿತರಾದ ಲೈಫ್

0
42

ಕರೋನಾ ಕಲಿಸಿದ ಪಾಠದ ಬಗ್ಗೆ ಹೇಳಬಹುದಾದರೆ ನಾನು ದಿನಾಲೂ ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟು ರಾತ್ರಿ ೯ ಗಂಟೆಗೆ ಮನೆ ಸೇರುತ್ತಿದ್ದೆ ನಮ್ಮ ಕುಟುಂಬದವರ ಜೊತೆಗೆ ಬೆರೆಯುವುದಾಗಲಿ ಮಾತನಾಡುವುದಕ್ಕೆ ನನಗೆ ಸಮಯ ಸಿಗುತ್ತಿರಲಿಲ್ಲ ವಾರದಲ್ಲಿ ಒಮ್ಮೆ ಮಾತ್ರ ನಾನು ನನ್ನ ಮಗನೊಂದಿಗೆ ಕಾಲ ಕಳೆಯುತ್ತಿದ್ದೆ,ಆದರೆ ಈ ಸದ್ಯಕ್ಕೆ ಈ ಕರೋನಾ ಎಫೆಕ್ಟ್ ನಿಂದ ಎಲ್ಲಾ ಲಾಕ್ ಡೌನ್ ಆಗಿ ಮನೆಯವರ ಜೊತೆಗೆ ಆರಾಮಾಗಿ ಸಂತೋಷದಿಂದ ಇರುವುದಕ್ಕೆ ಇದೊಂದು ಕಾಲಾವಕಾಶ ಸಿಕ್ಕಂತಾಗಿದೆ.

ಕಾರಣ ನಾನು ದಿನಾಲು ಸಾಹಿತ್ಯ, ಸಂಸ್ಕೃತಿ,ಸಂಘಟನೆ ಕವಿಗೋಷ್ಠಿ ಅಂತೆಲ್ಲ ಬೆನ್ನಿಗೊಂದು ಬ್ಯಾನರ್ ಕಟ್ಟಿಕೊಂಡು ಊರೂರು ಅಲೆಯುತ್ತಿದ್ದೆ.ಅಲ್ಲದೆ ತಿಂಗಳಲ್ಲಿ ೨ ಬಾರಿ ಬೆಂಗಳೂರಿಗೆ ೩ ತಿಂಗಳಲ್ಲಿ ಒಮ್ಮೆ ದೆಹಲಿ, ಗೋವಾ ಹೊರರಾಜ್ಯಗಳಿಗೆ ಹೋಗಿ ಬರುತ್ತಿದ್ದೆನಾದರೂ ನಾನೇನು ಮೋಜು ಮಸ್ತಿಗೆ ಹೋಗುತ್ತಿರಲಿಲ್ಲ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಟೆಂಡ್ ಆಗುತ್ತಿದ್ದೆ.ಆದರೆ ಏನು ಮಾಡೋದು ಈಗ ಜೀವನ ನಾಲ್ಕು ಗೋಡೆಗಳ ಮಧ್ಯದಲ್ಲೆ ಕಾಲ ಕಳೆಯುವಂತಾಗಿದೆ.ಆದರೂ ಕೂಡ ಮನೆಯಲ್ಲಿ ಇದ್ದುಕೊಂಡು ತುಂಬಾ ಬೇಸರವೆನಿಸುತ್ತಿದೆ ಯಾಕೆಂದರೆ ಕಳೆದ ಒಂದು ತಿಂಗಳಿನಿಂದ ಊಟ,ತಿಂಡಿ,ಕಾಫಿ ಮಾಡೋದು ಬಾತ್ರೂಮಿಗೆ ಹೋಗೋದು ಬರೋದು ಅಲ್ಲೇ ಸೋಫಾಕ್ಕೆ ಕುಳಿತುಕೊಳ್ಳುವುದು ಮಲಗೋದು ಒಂಥರಾ ಲೈಫ್ ಟ್ರೇನ್ ಜರ್ನಿ ತರ ಆಗೋಗಿದೆ.ನಾನು ಯಾವ ರೀತಿ ಕೆಲ್ಸ ಮಾಡ್ತಿದ್ದೆ ಅಂದರೆ ಹಗಲು ೧೨ ಗಂಟೆ ಸಾಲುತ್ತಿರಲಿಲ್ಲ ರಾತ್ರಿಯಾದ್ರೆ ಯಾಕಪ್ಪ ರಾತ್ರಿ ಆಗುತ್ತದೆ ಎಂದು ಎನಿಸುತ್ತಿತ್ತು ಇನ್ನೊಂದಿಷ್ಟು ಹಗಲು ಜಾಸ್ತಿ ಇರಬಾರದೆ ಅಂತ ಅದೆಷ್ಟೋ ಸಲ ಮನಸ್ಸಿನಲ್ಲಿ ಗುನುಗಿ ದ್ದುಂಟು ನನಗೆ ತಿಳುವಳಿಕೆ ಬಂದ ಮೇಲೆ ಅಂದರೆ ಸುಮಾರು ೨೫ ವರ್ಷಗಳಿಂದ ನಾನು ಮನೆಯಲ್ಲಿ ಇರುವುದಕ್ಕಿಂತ ಹೊರಗಡೆ ಇದ್ದುದ್ದೇ ಜಾಸ್ತಿ ಆದರೆ ಇವಾಗ ಮನೆಯಲ್ಲೇ ಇರುತ್ತಿದ್ದೆನೆ ಎಲ್ಲದಕ್ಕೂ ಕೋರೋನಾ ಲಾಕ್ ಡೌನ್ ಕಾರಣ.

Contact Your\'s Advertisement; 9902492681

ಆದರೂ ಇಂಥ ಸಮಯವನ್ನು ಒಂದಿಷ್ಟು ಸದುಪಯೋಗಪಡಿಸಿಕೊಂಡು ನಮ್ಮ ವೈಯಕ್ತಿಕ ಕೆಲಸಗಳಲ್ಲಿ ಮನೆಯಲ್ಲೆ ನಿರತನಾಗಿದ್ದೇನೆ.ಅದೆಷ್ಟೋ ದಿನಗಳಿಂದ ಇನ್ನೊಂದು ಕವನ ಸಂಕಲನ ಮಾಡಬೇಕು ಅಂತ ಪ್ರಯತ್ನ ಪಟ್ಟು ಸಮಯ ಸಿಗದೆ ವಿಫಲನಾಗಿದ್ದೆ ಸುಮಾರು ೮೦ ಕವನಗಳು ಹಾಗೆ ಬರೆದಿಟ್ಟಿದ್ದೆ ಆದರೆ ಸುಮಾರು ಐದಾರು ವರ್ಷಗಳಿಂದ ನನಗೆ ಸಮಯವೇ ಸಿಕ್ಕಿರಲಿಲ್ಲ ಇಂಥ ಸಮಯದಲ್ಲಿ ಅವುಗಳನ್ನು ಡಿಟಿಪಿ ಮಾಡಿ ರೆಡಿ ಮಾಡಿ ಇಡುವುದಕ್ಕೆ ಈ ಸಮಯವನ್ನು ಸದುಪಯೋಗಪಡಿಸಿಕೊಂಡಿದನೆ,ಹತ್ತಾರು ಸಣ್ಣ ಕಥೆಗಳು ಬರೆಯುವುದಕ್ಕೆ ಕಾಲಾವಕಾಶ ಸಿಕ್ಕಂತಾಗಿದೆ,ಸ್ವಲ್ಪ ಮನೆ ಸ್ವಚ್ಛ ಮಾಡುವುದಕ್ಕೂ ಅವಕಾಶ ಮಾಡಿಕೊಂಡಿದ್ದೇನೆ,ನಾನು ಬೈಕ್ ತೆಗೆದುಕೊಂಡು ಸುಮಾರು ೧೨ ವರ್ಷಗಳಾದರೂ ಬೈಕ್ ತಂದ ಹೊಸದರಲ್ಲಿ ೩ರಿಂದ ೪ ಬಾರಿ ಮಾತ್ರ ಗಾಡಿಯನ್ನು ಚೆನ್ನಾಗಿ ನೀರಿನಿಂದ ತೊಳೆದಿದ್ದು ವರಿಸಿದ್ದು ಬಿಟ್ರೆ ಈ ಕೋರೋನಾ ಸಮಯದಲ್ಲಿ ಮಾತ್ರ ೨ ಬಾರಿ ಚೆನ್ನಾಗಿ ಸಾಬೂನು ಅಚ್ಚಿ ತಿಕ್ಕಿ ತಿದ್ದಿ ತೀಡಿ ಹೊಳೆಯುವಂತೆ ಮಾಡಿದ್ದೇನೆ ಇದೆಲ್ಲದಕ್ಕೂ ಕಾರಣವೇ ಕೋರೊನಾ.

ಕೋರೋನಾ ಬಂದ್ಮೇಲೆ ಮನೆಯ ಎಲ್ಲರೊಂದಿಗೂ ಖುಷಿಯಿಂದ ಕಾಲ ಕಳೆಯುವುದು ಒಂದಿಷ್ಟು ಹರಟೆ ಹೊಡೆಯುವುದು ಎಲ್ಲರನ್ನು ನಕ್ಕಿನಗಿಸುವುದರ ಜೊತೆಗೆ ಹಳೆಯ ಮಧುರ ಗೀತೆಗಳನ್ನು ಹಾಡುವುದು ಅಲ್ಲದೆ ಬೇರೆ ಬೇರೆ ಎಲ್ಲ ಐಟಂಗಳನ್ನು ಮಾಡಿ ತಿನ್ನುವುದು ಒಂದಿಷ್ಟು ಖುಷಿ ಕೊಟ್ಟವು.ಸಿಟ್ಟು ಕೋಪ ಎಲ್ಲವೂ ಬದಿಗೊತ್ತಿ ತಾಳ್ಮೆಯಿಂದರಲು ಕಲಿಸಿದ್ದು ಈ ಕರೋನಾ ಹಾಗೂ ಬಹಳ ದಿನಗಳಿಂದ ಮರೆತ ಗೆಳೆಯರನ್ನು ನಾನೆ ಫೋನ್ ಮಾಡಿ ಅವರ ಕುಶಲೋಪರಿ ವಿಚಾರಿಸಿದೆ,ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವುದರ ಜೊತೆಗೆ ನಮ್ಮ ಕುಟುಂಬದ ಸುಮಾರು ನಾಲ್ಕೈದು ತಲೆಮಾರಿನ ಸದಸ್ಯರ ಕುರಿತು ನಮ್ಮ ಮನೆಯ ಹಿರಿಯರಿಂದ ಮಾಹಿತಿ ಪಡೆದು ನಾನೇ ವಂಶಾವಳಿಯನ್ನು ತಯಾರ ಪಡಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿತು. ಅಲ್ಲದೆ ನಮ್ಮೊಂದಿಗೆ ಮೂಗು ಮುರಿದುಕೊಂಡಿದ್ದ ಬೀಗರೊಂದಿಗೆ ಯಾವುದೇ ಹಮ್ಮು ಬಿಮ್ಮಿಲ್ಲದೆ ಪ್ರೀತಿಯಿಂದ ಮಾತನಾಡಿ ಅವರ ಕುಶಲೋಪರಿ ವಿಚಾರಿಸುವಂತೆ ಮಾಡಿದ ಈ ಕೋರೋನಾ ಜೊತೆಗೆ ನನ್ನ ದೇಹದ ತೂಕ ೩ ಕೆಜಿ ಜಾಸ್ತಿ ಮಾಡಿದೆ. ಹ ಹ ಹ ಹ ….!

 ಬಸವರಾಜ ಸಿನ್ನೂರು ಶಹಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here