ಕಲಬುರಗಿ: ಮಹಾವಿದ್ಯಾಲದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಇಂದು ತಾಂತ್ರಿಕ ಹಬ್ಬ, ವಿಭಾಗದಲ್ಲೆಡೆ ಪ್ರೋಜೆಕ್ಟ ಪ್ರದರ್ಶನದ ಸಡಗರ. ಮಹಾವಿದ್ಯಾಲಯ ಮಟ್ಟದಲ್ಲಿ ಇಂದು ಟೆಕ್ನೋವಿಷನಗೆ ಚಾಲನೆ ನೀಡಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಪ್ರೋಜೆಕ್ಟ್‌ಗಳ ಪ್ರದರ್ಶನ ಕೂಡ ಎರ್ಪಡಿಸಲಾಯಿತು. ವಿವಿಧ ವಲಯಗಳಲ್ಲಿ ತಯಾರಿಸಲಾದ ಪ್ರೋಜೆಕ್ಟಗಳು ಜನರ ಕನ್ಮಣ ಸೆಳೆದವು.
ನಗರದ ಪಿ.ಡಿ.ಎ. ತಾಂತ್ರಿಕ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ಸುಮಾರು ಹತ್ತು ಪ್ರೊಜೆಕ್ಟಗಳು ಭಾಗವಹಿಸಿದ್ದು ಇದರಲ್ಲಿ ಎರಡು ಪ್ರೋಜೆಕ್ಟಗಳು ವಿಭಾಗಮಟ್ಟದಲ್ಲಿ ಪ್ರಥಮ ಮತ್ತು ದ್ವೀತಿಯ ಪ್ರಶಸ್ತಿಗಳನ್ನು ಪಡೆದವು.
ತಮ್ಮ ವಿದ್ಯಾರ್ಥಿಗಳ ಈ ಯಶಸ್ವಿ ಪ್ರದಶರ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಅವರು ಮಾತನಾಡುತ್ತ ಮುಂಬರುವ ದಿನಗಳಲ್ಲಿ ಮಹಾವಿದ್ಯಾಲಯವು ವಿವಿಧ ವಿಶ್ವವಿದ್ಯಾಲಯ ಹಾಗೂ ಐಟಿ ಸಂಸ್ಥೆಗಳೊಂದಿಗೆ ಒಂಡಂಬಡಿಕೆ ಮಾಡಿಕೊಳ್ಳಲಾಗುವುದು ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಿಸಲಾಗುವುದು ಎಂದು ಹೇಳಿದರು.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ತಮ್ಮ ಸ್ವಾಗತ ಭಾಷದಲ್ಲಿ ಮಾತನಾಡುತ್ತಾ ತಮ್ಮ ವಿಭಾಗದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿಗಳ ಪ್ರೊಜೆಕ್ಟಗಳು ಉತ್ತಮವಾಗಿದ್ದು ಆಧುನಿಕತೆಯ ತಂತ್ರಜ್ಞಾನ ಅಡಕವಾಗಿದ್ದು ಸಮಾಜಕ್ಕೆ ಉಪಯೋಗವಾಗುವಂತಹುದಾಗಿವೆ ಎಂದರು.
ಇದೇ ಸಂದರ್ಭದಲ್ಲಿ ವಿಭಾಗದ ಉಪ ಪ್ರಾಧ್ಯಾಪಕರಾದ ಅಶೋಕ ಪಾಟೀಲ ಹಾಗೂ ಪ್ರಾಧ್ಯಾಪಕರಾದ ಡಾ. ಭಾರತಿ ಹರಸೂರ ಮತ್ತು ಡಾ.ವಿಶ್ವನಾಥ ಬುರಕಪಳ್ಳಿ, ಅವರು ಬರೆದ ಎರಡು ಪುಸ್ತಕಗಳನ್ನು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಸಿ. ಬಿಲಗುಂದಿ, ಪ್ರೋ. ಸಿ. ಆರ್. ಬಡಾ ಆಡಳಿತಾಧಿಕಾರಿಗಳು, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ, ಶ್ರೀ ಸತಿಶಚಂದ್ರ ಸಿ. ಹಡಗಲಿಮಠ ಆಡಳಿತ ಮಂಡಳಿ ಸದಸ್ಯರು, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥ ಅವರು ಬಿಡುಗಡೆಗೊಳಿಸಿದರು. ಈ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು ಮುಂಬರುವ ದಿನಗಳಲ್ಲಿ ಅವರ ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್. ಹೆಬ್ಬಾಳ ಅವರು ಮಾಹಿತಿ ವಿಜ್ಞಾನ ವಿಭಾಗವು ಸಕ್ರೀಯವಾಗಿ ವಿವಿಧ ತಾಂತ್ರಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಜ್ಞಾನ ನೀಡುತ್ತಿರುವುದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಟಕ್ನೋವಿಷನ್ ವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ತನು ಸಿಂಗ್, ಬೆಂಗಳೂರು ಅವರು ವಿದ್ಯಾರ್ಥಿಗಳು ಮೌಲ್ಯಧಾರಿತ ಶಿಕ್ಷಣವನ್ನು ರೂಢಿಸಿಕೊಂಡು ಸಮಾಜಕ್ಕೆ ಒಳಿತಾಗುವಂತಹ ತಂತ್ರಜ್ಞಾನ ಕೊಡಮಾಡಬೇಕೆಂದರು,
ಟೆಕ್ನೋವಿಷನಗೆ ಜಡ್ಜ್ ಆಗಿ ಅದೇ ಮಹಾವಿದ್ಯಾಲಯದ ಡಾ. ರೇಖಾ ಪಾಟೀಲ ಪ್ರಾಧ್ಯಾಪಕರು, ಗಣಕಯಂತ್ರ ವಿಭಾಗ, ಅವರು ಆಗಮಿಸಿದ್ದರು. ಮಹಾವಿದ್ಯಾಲಯದ ಡಿನ್ ಅಕೇಡೆಮಿಕ್ಸ್ ಡಾ. ಎಸ್. ಆರ್. ಪಾಟೀಲ, ಡಿನ್ ಅಡ್ಮೀನಸ್ಟ್ರೇಶನ್ ಡಾ. ಎ.ಬಿ. ಹರವಾಳಕರ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಡಾ.ವಿಶ್ವನಾಥ ಬುರಕಪಳ್ಳಿ, ಪ್ರೊ. ಉದಯ ಬಳಗಾರ, ಪ್ರೊ. ಅಶೋಕ ಪಾಟೀಲ ಮುಕುಂದ ಹರವಾಳಕರ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.