ಬಸವ ಜಯಂತ್ಯುತ್ಸವ ಅಂಗವಾಗಿ 10 ದಿನಗಳ ಯೋಗ ತರಬೇತಿ ಯಶಸ್ವಿ

0
67

ಬೀದರ್: ನಗರದ ಭೂಮಿ ಯೋಗ ಫೌಂಡೇಶನ್‌ ಟ್ರಸ್ಟ್ ವತಿಯಿಂದ ಬಸವ ಜಯಂತ್ಯುತ್ಸವ ಅಂಗವಾಗಿ ಜಿಲ್ಲೆಯ, ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಸಾರ್ವಜನಿಕರಿಗಾಗಿ 10 ದಿನಗಳ ಯೋಗಾಸನ ಶಿಕ್ಷಣ ತರಬೇತಿ ಶಿಬಿರ ಯಶಸ್ವಿಯಾಗಿ ಜರುಗಿತೆಂದು ಟ್ರಸ್ಟ್ನ ಸದಸ್ಯ  ಸಿದ್ದರಾಮ ಜಿ. ಪಾಟೀಲ್ ತಿಳಿಸಿದರು.

ಈ ಶಿಬಿರದಲ್ಲಿ ಸಾರ್ವಜನಿಕರಿಗಾಗಿ ಸರಳ ಹಾಗೂ ಪ್ರಾರಂಭಿಕ ಆಸನಗಳು, ಪ್ರಾಣಾಯಾಮ, ಹಾಗೂ ಸೂರ್ಯ ನಮಸ್ಕಾರ, ದೈನಂದಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ದೈಹಿಕ ಚಟುವಟಿಕೆಗಳ ಮಹತ್ವದ ಬಗ್ಗೆ ಭೂಮಿಯೋಗ ಫೌಂಡೇಶನ್‌ ಟ್ರಸ್ಟ್‌ ಯೋಗ ಶಿಕ್ಷಕ ಸಂತೋಷ ಜಿ. ಶೆಡೋಲ್ಕರವರಿಂದ ತರಬೇತಿ ನೀಡಲಾಯಿತು ಎಂದು ಹೇಳಿದರು.

Contact Your\'s Advertisement; 9902492681

ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದಸಂತೋಷ ಜಿ. ಶೆಡೋಲ್ಕರವರು ಯೋಗವು ರೋಗ ನಿರೋಧಕ ಶಕ್ತಿಯಾಗಿ ನಮ್ಮನ್ನು ಖಾಯಿಲೆಗಳಿಂದ ರಕ್ಷಿಸುವಲ್ಲಿ ತನ್ನ ಮಹತ್ವವಾದ ಪಾತ್ರವನ್ನು ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ಯೋಗಾಸನ ಅಭ್ಯಾಸ ರೂಢಿಸಿ ಕೊಂಡರೆ ಖಾಯಿಲೆಯಿಂದ ಮುಕ್ತಿ ಪಡೆದು ನೆಮ್ಮದಿಯಿಂದ ಬದುಕ ಬಹುದು ಎಂದು ಸಲಹೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಗ್ರಾಮಸ್ಥರು ಹಾಗೂ ಇನ್ನಿತರರು ಭಾಗವಹಿಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here