ನವದೆಹಲಿ: ದೇಶದಲ್ಲೇಡೆ ಭಾರಿ ವಿವಾದ ಕಾರಣವಾದ ನಾಥೂರಾಮ್ ಗೋಡ್ಸೆಗೆ ಸಂಬಂಧಿಸಿದಂತೆ ಹೇಳಿಕೆಗಳಿಗೆ ಬಿಜೆಪಿ ರಾಷ್ಟ್ರೀಯಧ್ಯಕ್ಷ ಅಮಿತ್ ಶಾ ಅವರು ತಮ್ಮ ಪಕ್ಷದ ವಿವಾದಾತ್ಮಕ ಹೇಳಿಕೆ ನೀಡಿರುವ ಪಕ್ಷದ ಇಬ್ಬರು ಸಚಿವರು ಸೇರಿದಂತೆ ಮೂವರಿಗೆ ನೋಟಿಸ್ ನೀಡಿದ್ದಾರೆ.
ಶಾ ತಮ್ಮ ಪಕ್ಷದ ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ, ಸಂಸದ ನಳೀನ್ ಕುಮಾರ ಕಟಿಲ್ ಹಾಗೂ ಭೂಪಾಳ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರೋಪಿ ಪ್ರಜ್ಞಾ ಸಿಂಗ್ ಠಾಕೋರ್ ಅವರಿಗೆ ಅವರಿಗೆ ನೋಟಿನ್ ನೀಡಿ ಹೇಳಿಕೆಗೆ ಸಂಬಂಧಿಸಿದಂತೆ 10 ದಿನಗಳ ಒಳಗೆ ನಾಯಕರು ತಮ್ಮ ಸ್ಪಷ್ಟನೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಪಕ್ಷದ ನಾಯಕರ ಈ ರೀತಿಯಾಗಿ ಬಹಿರಂಗ ಹೇಳಿಗೆ ನೀಡಿರುವುದು ಪಕ್ಷದ ದಕ್ಕೆ ಉಂಟಾಗಿದ್ದು, ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಬೇಕಾಗಿ, ಪಕ್ಷದ ಅಂತರಿಕವಾಗಿ ಶಿಸ್ತು ಸಮಿತಿ ಎದುರಿಸಬೇಕಾಗುತ್ತದೆ ಎಂದು ಅಮಿತ್ ಆಜ್ಞೆ ಮಾಡಿದ್ದಾರೆ ಎನ್ನಲಾಗಿದ್ದು, ಅಲ್ಲದೆ, ಈ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆಗಳೇ ಹೊರತು ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮೂವರು ನಾಯಕರು ಗೋಡ್ಸೆ ದೇಶ ಭಕ್ತ ಎಂಬ ಹೇಳಿಕೆ ನೀಡಿ ಕುರಿತ ವಿವಾದಕ್ಕೆ ಕಾರಣವಾಗಿದ್ದು. ತಮ್ಮ ಹೇಳಿಗಳ ಕುರಿತು ನಾಯಕರು ಕ್ಷಮೆಯಾಚಿಸಿದ್ದಾರೆ.