ರಂಜಾನ್ ಹಬ್ಬದ ಪ್ರಯುಕ್ತ ಪೊಲೀಸರಿಂದ ಶಾಂತಿ ಸಭೆ

0
85

ಶಹಾಬಾದ: ರಂಜಾನ್ ಹಬ್ಬದಂದು ಮುಸ್ಲಿಂ ಬಾಂಧವರು ಯಾವುದೇ ಕಾರಣಕ್ಕೂ ಹೊರಗಡೆ ಬರಬಾರದು. ಹಬ್ಬವನ್ನು ಮನೆಯಲ್ಲಿಯೇ ಕುಟುಂಬದೊಂದಿಗೆ ಆಚರಿಸತಕ್ಕದ್ದು ಎಂದು ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಹೇಳಿದರು.

ಅವರು ಸೋಮವಾರ ನಗರಸಭೆಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ಮಹಾಮಾರಿ ಕರೋನಾ ವೈರಸ್ ದೇಶಾಧ್ಯಂತ ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದೆ. ನಗರದಲ್ಲೂ ಮೂರು ಜನರಿಗೆ ಕರೊನಾ ವೈರಸ್ ತಗುಲಿದ್ದು, ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಈ ರೋಗ ಹರಡದಂತೆ ತಡೆಗಟ್ಟಬೇಕಾದರೆ ಸಾಮಾಜಿಕ ಅಂತರ ಹಾಗೂ ಜನಸಂದಣಿ ಇರಬಾರದು.ಆದ್ದರಿಂದ ಪ್ರತಿ ವರ್ಷ ಹಬ್ಬದ ದಿನದಂದು ಮಜ್ಜಿದ್, ಈದ್ಗಾಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುವ ಕಾರ್ಯ ನಡೆಯುತ್ತಿತ್ತು. ಈ ಬಾರಿ ಹೊರಗಡೆ ಎಲ್ಲೂ ಪ್ರಾರ್ಥನೆಗೆ ಅವಕಾಶವಿಲ್ಲ. ನೀವು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಸಂಬಂಧಿಕರಿಗೆ, ಗೆಳೆಯರಿಗೆ ಇಫ್ತಿಯಾರಕೂಟ ಏರ್ಪಡಿಸಬಾರದು. ಯಾರನ್ನೂ ಮನೆಗೆ ಕರೆಯಬಾರದು.ಒಂದು ವೇಳೆ ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು.ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹೊಣೆ ನಮ್ಮೆಲ್ಲರದಾಗಿದೆ.ಆದ್ದರಿಂದ ಈ ಬಾರಿ ಹಬ್ಬವನ್ನು ಮನೆಯಲ್ಲೇ ಆಚರಿಸಿ ಎಂದು ಹೇಳಿದರು.

ತಹಸೀಲ್ದಾರ ಸುರೇಶ ವರ್ಮಾ, ಪಿಐ ಅಮರೇಶ.ಬಿ, ಪೌರಾಯುಕ್ತ ವೆಂಕಟೇಶ, ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಆಯುಕ್ತೆ ನೀಲಗಂಗಮ್ಮ.ಎಸ್.ಬಬಲಾದ, ಡಾ.ರಶೀದ್ ಮರ್ಚಂಟ್, ಅಣವೀರ ಇಂಗಿನಶೆಟ್ಟಿ, ವಿಜಯಕುಮಾರ ಮುಟ್ಟತ್ತಿ, ರಾಜಮಹ್ಮದ್ ರಾಜಾ,ಡಾ.ಅಹ್ಮದ್ ಪಟೇಲ್, ಮ.ಮತೀನ್ ಸೇಠ, ಮ.ಮಸ್ತಾನ, ಮ.ತೌಫಿಕ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here