ಕ್ಷೌರಿಕರ ಬದುಕು ಸಂಕಷ್ಟದಲ್ಲಿ: ಶಿವುಪುರ

0
223

ವಾಡಿ: ಲಾಕ್‌ಡೌನ್ ಘೋಷಣೆಯಿಂದ ಕ್ಷೌರ ವೃತ್ತಿ ಸ್ಥಗಿತಗೊಂಡಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಅಂಗಡಿ ತೆರೆಯಲು ಅವಕಾಶ ಕೊಡಿ ಅಥವ ಪ್ರತಿಯೊಂದು ಕುಟುಂಬಕ್ಕೂ ದಿನಸಿ ಸೌಲಭ್ಯ ಒದಗಿಸಿ ಎಂದು ಸವಿತಾ ಸಮಾಜದ ನಗರಾಧ್ಯಕ್ಷ ಹಣಮಂತ ಶಿವುಪುರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡುವ ಮೂಲಕ ಸಮಾಜದ ಜನರ ಬದುಕಿನ ಕಷ್ಟ ಹೇಳಿಕೊಂಡಿರುವ ಶಿವುಪುರ, ಕ್ಷೌರ ವೃತ್ತಿಯೊಂದೇ ನಮ್ಮನ್ನು ಬದುಕಿಸುತ್ತಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಘೋಷಿಸಲಾದ ಲಾಕ್‌ಡೌನ್ ಆದೇಶಕ್ಕೆ ತಲೆಬಾಗಿ ಅಂಗಡಿಗಳನ್ನು ಬಂದ್ ಮಾಡಿ ಮನೆಯಲ್ಲಿದ್ದೇವೆ. ತಿಂಗಳಿಂದ ಉಪಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ.

Contact Your\'s Advertisement; 9902492681

ಇಂದು ದುಡಿದು ಇಂದೇ ಊಟ ಮಾಡಿ ಬದುಕುವ ಕುಟುಂಬಗಳು ಸವಿತಾ ಸಮಾಜದಲ್ಲಿ ಶೇ.೯೦ರಷ್ಟಿವೆ. ವೃತ್ತಿಗೆ ಮರಳದಿದ್ದರೆ ಕ್ಷೌರ ವೃತ್ತಿಯನ್ನೇ ನಂಬಿರುವ ನೂರಾರು ಬಡ ಕುಟುಂಬಗಳು ಊಟಕ್ಕೆ ಭಿಕ್ಷೆ ಬೇಡಬೇಕಾಗುತ್ತದೆ. ಈ ವರೆಗೂ ಸರಕಾರ ನಮ್ಮ ನೆರವಿಗೆ ಬಂದಿಲ್ಲ. ಸವಿತಾ ಸಮಾಜದ ಪ್ರತಿ ಕುಟುಂಬಕ್ಕೂ ಆಹಾರದ ವ್ಯವಸ್ಥೆ ಮಾಡಬೇಕು ಅಥವ ಅಂಗಡಿ ತೆರೆಯಲು ಅವಕಾಶ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here