ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಕಲಬುರಗಿ ಉಪವಿಭಾಗದ ವ್ಯಾಪ್ತಿಯಲ್ಲಿ 2020ರ ಏಪ್ರಿಲ್ 7 ರಿಂದ 21 ರವರೆಗೆ ಒಟ್ಟು 111 ಅಬಕಾರಿ ದಾಳಿ ನಡೆಸಿ 13 ಪ್ರಕರಣ ದಾಖಲಿಸಿದ್ದಾರೆ ಎಂದು ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ 235.710 ಲೀಟರ್ ಮದ್ಯ, 2.600 ಲೀ. ಬೀಯರ್, 66.000 ಲೀ. ಸೇಂಧಿ, 43.000 ಲೀ. ಕಳ್ಳಭಟ್ಟಿ ಸಾರಾಯಿ, 260 ಲೀ. ಬೆಲ್ಲದ ಕೊಳೆ ಮತ್ತು 1.700 ಸಿ.ಹೆಚ್., 1.500 ಗ್ರಾಂ ಪೇಸ್ಟ್, ಮೂರು ದ್ವಿಚಕ್ರ ವಾಹನ, ಎರಡು ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪರಾರಿಯಾದ ಆರೋಪಿರ ಬಂದನಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ. ಒಟ್ಟು ಜಪ್ತಿ ಮಾಡಲಾದ ವಸ್ತು ಹಾಗೂ ವಾಹನಗಳ ಮೌಲ್ಯ 6,32,845 ಇರುತ್ತದೆ ಎಂದು ಅವರು ತಿಳಿಸಿದ್ದಾರೆ.