ಸೇಡಂ ಕ್ಷೇತ್ರದ ಶಾಸಕರ ನಡೆಗೆ ಭಾರತ ಮುಕ್ತಿ ಮೋರ್ಚಾ ಘಟಕ ಖಂಡನೆ

0
583

ಸೇಡಂ: ಮಾಹ ಮಾರಿ ಕೊರೋನಾ ವೈರಾಣುವಿನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ  ಆಯಾ ಭಾಗದ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನರಿಗೆ ಧೈರ್ಯ ತುಂಬುವ ಮತ್ತು ಜನರ ಸಂಕಷ್ಟಕ್ಕೆ  ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಶಾಸಕರಾದ ರಾಜಕುಮಾರ ಪಾಟೀಲರು ತೆಲ್ಕೂರ್ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ದೈರ್ಯ ಹೇಳದೆ ಹಾಗು ಈ ಭಾಗದ ಅಧಿಕಾರಿಗಳಿಗೆ ಕೋರೊನಾ ಹತೋಡಿಯಲ್ಲಿಡುವಂತೆ ಸಭೆ ನಡೆಸದಿರುವುದು ಭಾರತ ಮುಕ್ತಿ ಮೋರ್ಚಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಸಂಘಟನೆ ನೀಡಿದ ಅವರು ಸೇಡಂ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ವಿಶೇಷವಾಗಿ ತೆಲಂಗಾಣದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜೇಟ್ಲರ್ ಸೋತಂಗಲ್, ಹಲಕೋಡ , ವೆಂಕಟಪೂರ ಗ್ರಾಮಗಳು ಸೇರಿದಂತೆ ಇನ್ನೂಳಿದ ಗ್ರಾಮಗಳಲ್ಲಿ ಜನರು ಭಯಬೀತರಾಗಿ ಬದುಕುತ್ತಿದ್ದಾರೆ ಅಲ್ಲದೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನರ ಬದುಕು ಚಿಂತಾಜನಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಶಾಸಕರು ಪ್ರತಿಯೊಂದು ಗ್ರಾಮಗಳಿಗೆ ಬೇಟಿ ನೀಡಿ ಜನರ ವೈದ್ಯರ ಕಷ್ಟಗಳಿಗೆ ಸ್ಪಂದಿಸಿ ಕೂಡಲೇ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು, ಇಲ್ಲದಿದ್ದರೆ ಶಾಸಕರು ಕಂಡಲ್ಲಿ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here