ಕಲಬುರಗಿ: ಜಿಲ್ಲೆಯಲ್ಲಿ ರ ಲಾಕ್ ಡೌನ್ ಮುಂದುವರೆದಿದ್ದು, ಪೊಲೀಸರು ಹಿರಿಯ ನಾಗರಿಕರು ಸೇರಿ 35 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್ ಮಾಡುತ್ತಿರುವುದು ಖಂಡನೀಯ ಎಂದು ಹೈದರಾಬಾದ್ ಕರ್ನಾಟಕ ಸೂಶಿಯಲ್ ಜಾಗ್ರತಿ ಫೂರಮ್ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳಿ ಮನವಿ ಮಾಡಿದ್ದಾರೆ.
ಅವರು ಇಂದು ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ಜಿಲ್ಲೆಯಲ್ಲಿ ಕೋವಿಡ್-19 ವಿರುದ್ಧ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಮಾಡುತಿರುವ ಕಾರ್ಯ ಶ್ಲಾಘನೀಯವಾಗಿದ್ದು, ಆದರೆ ಕೆಲವು ಪೊಲೀಸರು ಹಿರಿಯರನ್ನು ಶಿಕ್ಷಿಸುವುದು ಬಾರಿ ಆತಂಕ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
12 ರಿಂದ 22 ವಯಸ್ಸಿನ ಯುವಕರು ವಿನಾಕಾರಣ ಬೈಕ್ ಮೇಲೆ ಓಡಾಡುವರಿಗೆ ಶಿಕ್ಷೆ ನೀಡಲಿ ಆದರೆ ಚೇತರಿಸಿಕೊಳ್ಳಲು ಸಾಧ್ಯವಾದ ರೀತಿ ಗುರಿಯಾಗಿಸುತ್ತಿರುವುದು ಲಾಠಿ ಚಾರ್ಜ್ ಮಾಡುವುದು ಖಂಡನೀಯವಾಗಿದೆ.
35 ರಿಂದ 40 ರ್ಷದ ವ್ಯಕ್ತಿಗಳು ಸೂಕ್ತ ಕಾರಣ ಇಲ್ಲದೆ ಮನೆಯಿಂದ ಅನಾವಶ್ಯಕ ಹೊರಗಡೆ ಬರುವುದಿಲ್ಲ ಇಂತಹವರನ್ನು ವಿಚಾರಣೆ ಮಾಡದೇ ಲಾಠಿ ಚಾರ್ಜ್ ಮಾಡಲಾಗುತ್ತಿದ್ದು,. ಮೌಲಾನಾ ಮತ್ತು ಮೌಜನ್ ಇಬ್ಬರಿಗೆ ಆಝಾಅನ್ ಮತ್ತು ನಮಾಜ್ ಮಾಡಲು ಸರಕಾರ ಅವಕಾಶ ನೀಡಿದ್ದು,ಮಸಜಿದ್ ಗೆ ತೆರಳುವ ವೇಳೆ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗುತಿದೆ ಎಂದು ತಿಳಿದಿದ್ದಾರೆ.
ಲಾಕ್ ಡೌನ್ ಉಲ್ಲಂಘಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳಬೇಕು ಆದರೆ ನಿರ್ದೋಸಿ ವ್ಯಕ್ತಿಗಳನ್ನು ಸಹ ಶಿಕ್ಷೆಗೆ ಗುರಿಯಾಗಿಸುವುದ ತಪ್ಪಿಸಿ ಹಿರಿಯ ವ್ಯಕ್ತಿಗಳಿಗೆ ವಿನಾಯಿತಿ ನೀಡಬೇಕೆಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.