ಕಲಬುರಗಿ: ಜಿಲ್ಲೆ ಕೊರೋನಾ ಹಾಟ್ ಸ್ಪೋಟ್ ಘೋಷಣೆಯಾಗಿದ್ದು, ಇಲ್ಲಿ ಸದ್ಯ ಪೀಡಿತರ ಸಂಖ್ಯೆ 36ಕ್ಕೆ ತಲುಪಿದ್ದು, ಇದುವರೆಗೆ ನಾಲ್ಕು ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಇಂದು ಮತ್ತೊಬ್ಬ 32 ವರ್ಷದ ವ್ಯಕ್ತಿಗೆ ರೋಗಿ ಸಂಖ್ಯೆ P413 ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ.
ಪೀಡಿತರೆಲ್ಲರನ್ನು ನಿಗದಿತ ಕಲಬುರಗಿ ಇ.ಎಸ್.ಐ.ಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮಗಾಗಿ ಜಿಲ್ಲೆಯಲ್ಲಿ ರೇಡ್ ಝೋನ್ ಎಂದು ಘೋಷಿಸಿ ರೋಗ ತಡೆಯಲು ಕ್ರಮಗಳು ಕೈಗೊಳಲಾಗುತ್ತಿದೆ ಎನ್ನಲಾಗಿದೆ.