ಸುರಪುರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ೮೮೭ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಬೆಳಿಗ್ಗೆ ೧೦ ಗಂಟೆಗೆ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಬಸವಣ್ಣನವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ನಂತರ ಮಾತನಾಡಿದ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ,ಬಸವಣ್ಣನವರ ವಚನಗಳು ವಿಶ್ವಕ್ಕೆ ಮಾದರಿ ಸಂದೇಶವನ್ನು ನೀಡಿದವುಗಳಾಗಿವೆ.ಅವರು ತಮ್ಮ ಬದುಕಿನಲ್ಲಿ ಅನುಭವಿಸಿದ ನೈಜ ಘಟನೆಗಳನ್ನೆ ವಚನಗಳ ರೂಪದಲ್ಲಿ ರಚಿಸಿದ್ದಾರೆ.ಅವರು ಹೇಗೆ ಬದುಕಿದರೊ ಹಾಗೆಯೇ ತಮ್ಮ ಸಂದೇಶವನ್ನಿ ವಿಶ್ವಕ್ಕೆ ನೀಡಿದ ಮಹಾನ್ ಪುರುಷರಾಗಿದ್ದಾರೆ ಎಂದರು.
ನಗರ ಯೊಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ್ ಮಾತನಾಡಿ,ಈ ವರ್ಷ ಕೊರೊನಾ ವೈರಸ್ ಕಾರಣ ದಿಂದ ಜಯಂತಿಯನ್ನು ಸರಳವಾಗಿ ಆಚರಿಸಬೇಕಿದೆ.ಎಲ್ಲರು ನಮ್ಮ ನಮ್ಮ ಮನೆಗಳಲ್ಲಿಯೂ ಸರಳವಾಗಿ ಜಯಂತಿ ಆಚರಿಸಿ ಕೊರೊನಾ ನಿರ್ಮೂಲನೆಯಾಗಲೆಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಜಾಲಹಳ್ಳಿ,ಸಂಗಣ್ಣ ಎಕ್ಕೆಳ್ಳಿ, ಜಗದೀಶ ಪಾಟೀಲ್,ಚಂದ್ರಶೇಖರ ಡೊಣೂರ,ಆನಂದ ಮಡ್ಡಿ,ಶರಣು ಅರಕೇರಿ,ಚಂದ್ರು ಆವಂಟಿ, ಬಸ್ಸಯ್ಯ ಸ್ವಾಮಿ,ಸಿದ್ದಣ್ಣಗೌಡ ಹೆಬ್ಬಾಳ,ಕುಮಾರ ಹೂಗಾರ ಹಾಗೂ ತಹಸೀಲ್ ಸಿಬ್ಬಂದಿಗಳಾದ ಕೊಂಡಲ ನಾಯಕ, ಸೋಮಶೇಖರ ನಾಯಕ,ಪ್ರದೀಪ ನಾಲ್ವಡೆ,ಸೋಮಶೇಖರ ಪತ್ತಾರ ಸೇರಿದಂತೆ ಅನೇಕರಿದ್ದರು.